ಸುಂಠಾಣ ಶಾಖಾಮಠದ ಗುರುಭವನ ಲೋಕಾರ್ಪಣೆ ಪೂಜ್ಯರಿಗೆ ತುಲಾಭಾರ ಹಾಗೂ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ವಾಲ್ ಪೋಸ್ಟರ್ ಬಿಡುಗಡೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ಸುಗೂರ ಶ್ರೀ ಗುರುರುದ್ರಮುನೀಶ್ವರ ಹಿರೇಮಠದ ಸುಂಠಾಣ ಶಾಖಾಮಠದ ನೂತನ ಗುರುಭವನ ಲೋಕಾರ್ಪಣೆ ಪೂಜ್ಯರಿಗೆ ತುಲಾಭಾರ ಹಾಗೂ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ವಾಲ್ ಪೋಸ್ಟರ್ ನ್ನು ಸಂಠಾಣ ಗ್ರಾಮದ ಭಕ್ತರ ಸಮ್ಮುಖದಲ್ಲಿ ಶ್ರೀ ರುದ್ರಮುನೀಶ್ವರ ಹಿರೇಮಠ, ಸುಗೂರ, ಸುಂಠಾಣ ಶಾಖಾ ಮಠದ ಶ್ರೀ ಡಾ. ಚನ್ನರುದ್ರಮುನಿ ಶಿವಾಚಾರ್ಯರು ಶುಕ್ರವಾರ ಬಿಡುಗಡೆ ಮಾಡಿದರು.
ಪುರಾಣ ಪ್ರವಚನ 18 ಜನವರಿ 2026 ರಿಂದ ಫೆಬ್ರವರಿ 7 ರ ವರೆಗೆ ಗಡಿಗೌಡಗಾಂವ ಶ್ರೀ ಹಾವಗಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ.ಶಾಂತವೀರ ಶಿವಾಚಾರ್ಯರು ನಡೆಸಿಕೊಡಲಿದ್ದಾರೆ. ಹೀಗಾಗಿ ಸುಗೂರ ಸುಂಠಾಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗುರುಭವನ ಲೋಕಾರ್ಪಣೆ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

