ಅಂತರ್ಜಲ ರಕ್ಷಣೆಯ ಕುರಿತು ಜನಜಾಗ್ರತಿ ಮೂಡಿಸುವ ಕಾರ್ಯಕ್ರಮ | ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸರಕಾರಿ ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಹಿರಿಯ ಭೂ ವಿಜ್ಞಾನಿ ಜಿಲ್ಲಾ ಅಂತರ್ಜಲ ಕಚೇರಿ ಕಲಬುರಗಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನೀರಿದ್ದರೆ ನಾಳೆ ಘೋಷವಾಕ್ಯದಡಿ ನಮ್ಮ ಭೂಮಿ ನಮ್ಮ ನೀರು, ನಮ್ಮ ಶಕ್ತಿ ಎನ್ನುವ ವಿಷಯದ ಅಂತರ್ಜಲ ರಕ್ಷಣೆಯ ಕುರಿತು ಜನಜಾಗ್ರತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
8 ರಿಂದ 10ನೆe ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸುಪ್ರಿಯಾ ನಾಗಯ್ಯ ಸ್ವಾಮಿ ಎಂ.ಡಿ.ಆರ್.ಎಸ್ ರೇವಗ್ಗಿ ಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ನಾಗಯ್ಯ ಸ್ವಾಮಿ ಪ್ರಥಮ ಸ್ಥಾನ, ಎಂ.ಡಿ.ಆರ್.ಎಸ್ ಚಿತ್ತಾಪುರ ಟೌನ್ ವಿದ್ಯಾರ್ಥಿನಿ ಅಕ್ಷತಾ ಸಿದ್ದರಾಮ ದ್ವಿತೀಯ ಸ್ಥಾನ ಮತ್ತು ಸಿದ್ದಿಕಾ ಹಿಮಾಯುನ್ ಜಿಎಚ್ಎಸ್ ಉರ್ದು ಚಿತ್ತಾಪುರ ಇವರು ತೃತಿಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಬಿಆರ್’ಸಿ ಆದಪ್ಪ ಸಜ್ಜನ್, ಇಸಿಓ ರವೀಂದ್ರ ಮಲ್ವಾಡ್ಕರ್ ಮತ್ತು ಚಿತ್ರಕಲಾ ಶಿಕ್ಷಕರುಗಳಾದ ನರಸಿಂಹ ಅಲಮೇಲಕರ್ ನಟರಾಜ್ ಶಿಲ್ಪಿ, ಯಲ್ಲಪ್ಪ ಕಾಂಬಳೆ, ನರಸಪ್ಪ ಜಾನಾ, ಶಿವಲೀಲಾ ಉಪ್ಪಿನ, ಸಿದ್ದಲಿಂಗ ಭಂಡಾರಿ, ರೇಣುಕಾ, ವಿಜಯಲಕ್ಷ್ಮಿ, ರಾಘವೇಂದ್ರ, ಸಾಬಣ್ಣ ದೊಡ್ಡಮನಿ, ಸುಜಾತ ಹಿರೇಮಠ್, ರೇಣುಕಾ ಜಿಟಿ, ಶಾಹಿನಾ ಫಾತಿಮಾ ಮುಂತಾದವರು ಉಪಸ್ಥಿತರಿದ್ದರು.

