Oplus_0

ಉಮೇಶಬಾಬು ಸಾಸಾಬಾಳ ಅವರ ಮೂರು ಕೃತಿಗಳ ಲೋಕಾರ್ಪಣೆ | ನಾಗಾವಿ ನೆಲದಲ್ಲಿ ಸಾಹಿತಿಗಳಿಗೇನು ಕೊರತೆಯಿಲ್ಲ: ತೇಗಲತಿಪ್ಪಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾಗಾವಿ ನೆಲದಲ್ಲಿ ಸಾಹಿತಿಗಳಿಗೇನು ಕೊರತೆಯಿಲ್ಲ ಎನ್ನುವುದನ್ನು ಉಮೇಶಬಾಬು ಅವರು ತೋರಿಸಿಕೊಟ್ಟಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪುರ ಹಾಗೂ ಸುವನಾ ಪ್ರಕಾಶನ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿತ್ರಕಲಾವಿದ ಉಮೇಶಬಾಬು ಎಂ. ಸಾಸಾಬಾಳ ಆವರ “ಮೌನಡಂಗುರ” ಕವನ ಸಂಕಲನ, “ಭಾವಬಂಧುರ” ಗಜಲ್ ಸಂಕಲನ ಮತ್ತು “ಭಾವಭೃಂಗ” ಗಜಲ್ ಸಂಕಲನ ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯದ ವಿವಿಧ ಪ್ರಾಕಾರದಲ್ಲಿ ಅನೇಕ ಕೃತಿಗಳನ್ನು ಉದಯೋನ್ಮುಖ ಬರಹಗಾರರು ಪ್ರಕಟಿಸಿ ಜನಾರ್ಪಣೆಗೊಳಿಸಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಪುಸ್ತಕಗಳನ್ನು ಹೋರತರುವಾಗಿನ ಕಷ್ಟ ಲೇಖಕರಿಗೆ ಮಾತ್ರ ಗೊತ್ತು ಎಂದರು.

ಸಾಹಿತ್ಯ ಕೃತಿಗಳ ಪ್ರಕಟಣೆ ಹೆಚ್ಚಾಗುತ್ತಿದೆ ಆದರೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗದಿರುವುದು ಕಳವಳದ ಸಂಗತಿಯಾಗಿದೆ.

ಸಾನಿಧ್ಯ ವಹಿಸಿದ್ದ ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರು, ಲೇಖಕ ಉಮೇಶಬಾಬು ಸಾಸಾಬಾಳ್, ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್‌ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಸುಧಾಕರರಾವ್ ಸರಾಫ್, ಸುವನಾ ಪ್ರಕಾಶನ ಸಂಸ್ಥಾಪಕಿ ಡಾ. ಅಂಬುಜಾ ಮಳಖೇಡ್ಕರ್, ಕವಿ ಅಶೋಕಕುಮಾರ ಎಂ. ಬಿ, ವೇದಿಕೆಯಲ್ಲಿದ್ದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ. ಜೆ. ಎಸ್. ಖಂಡೇರಾವ್ ಮೌನಡಂಗುರ (ಕವನ ಸಂಕಲನ), ಮಕ್ಕಳ ಸಾಹಿತಿ ಎ. ಕೆ. ರಾಮೇಶ್ವರ ಭಾವಬಂಧುರ (ಗಜಲ್ ಸಂಕಲನ), ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಭಾವಭೃಂಗ (ಗಜಲ್ ಸಂಕಲನ) ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಸೇಡಂ ಸಾಹಿತಿ ಲಿಂಗಾರೆಡ್ಡಿ ಶೇರಿ, ಮೌನಡಂಗುರ (ಕನನ ಸಂಕಲನ), ಸೇಡಂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಭಾವಬಂಧುರ ಹಾಗೂ ಭಾವಭೃಂಗ (ಗಜಲ್ ಸಂಕಲನಗಳು) ಕೃತಿಗಳ ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಸಿದ್ದಣ್ಣಗೌಡ ಮಾಲಿ ಪಾಟೀಲ, ಸಿದ್ದಲಿಂಗ ಬಾಳಿ, ಸಿದ್ದಣ್ಣಗೌಡ ಆರ್.ಡಿ, ತಿಪ್ಪಣ್ಣ ಸಂಗಾವಿ, ರೇವಣಸಿದ್ದಪ್ಪ ರೋಣದ, ಪಂಚಾಕ್ಷರಿ ಪೂಜಾರಿ, ಶ್ರೀಮಂತ ಗುತ್ತೇದಾರ, ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಮುಡುಬಿ ಗುಂಡೇರಾವ್, ಶಿವರಾಜ್ ಅಂಡಗಿ, ಲಿಂಗಣ್ಣ ಮಲ್ಕನ್, ದೇವಪ್ಪ ನಂದೂರಕರ್, ಸಂತೋಷ ಹಾವೇರಿ, ಕೋಟೇಶ್ವರ ರೇಷ್ಮಿ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಮಹೇಶ್ ಕಾಶಿ, ಕೇದಾರನಾಥ ಸಾತನೂರ, ವೀರಸಂಗಪ್ಪ ಸುಲೇಗಾಂವ, ರವಿ ಪಾಟೀಲ ಎಸಿಸಿ, ನಟರಾಜ್ ಶಿಲ್ಪಿ, ತುಕಾರಾಮ ನಾಯಕ, ಶರಣು ಸಾಹು ಮೋಗಲಾ, ದೇವಿಂದ್ರಪ್ಪ ಶಹಾಬಾದಕರ್ ಸೇರಿದಂತೆ ಇತರರು ಇದ್ದರು.

ಶಂಕರ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗಮೇಶ ರೋಣದ ಸ್ವಾಗತಿಸಿದರು, ಸಾಧನಾ ಶಿಲ್ಪಿ ನಿರೂಪಿಸಿದರು. ನಂತರ ದಿಗ್ಗಾಂವ, ಸಾತನೂರು, ಮೊಗಲಾ ಮತ್ತು ಚಿತ್ತಾಪುರ ಪಟ್ಟಣದ ಅನೇಕರು ಲೇಖಕ ಉಮೇಶಬಾಬು ಸಾಸಾಬಾಳ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!