ಭೀಮನಳ್ಳಿ ಗ್ರಾಮದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ, ಕಸಾಪ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ | ಮಕ್ಕಳಲ್ಲಿನ ಪ್ರತಿಭೆಗಳು ಹೊರತರುವ ಕಸಾಪ ಕಾರ್ಯ ಶ್ಲಾಘನೀಯ: ಜಗಣ್ಣಗೌಡ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಲ್ಲಿ ಅನೇಕ ವಿವಿಧ ಬಗೆಯ ಪ್ರತಿಭೆಗಳು ಅಡಗಿವೆ. ಅವರ ಪ್ರತಿಭೆಗಳು ಹೊರತರುವ ಕಾರ್ಯ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ ಹೇಳಿದರು.
ತಾಲೂಕಿನ ಭೀಮನಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭೀಮನಳ್ಳಿ ವಲಯ ಕಸಾಪ ಶನಿವಾರ ಹಮ್ಮಿಕೊಂಡ ಮಕ್ಕಳ ಸಾಹಿತ್ಯ ಸಂಭ್ರಮ ಮತ್ತು ಕಸಾಪ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿನ ಪ್ರತಿಭೆಗಳು ಹೊರತಂದರೆ ದೇಶ ಸಮೃದ್ದಿಯಾಗುತ್ತದೆ ಎಂದರು.
ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿಯಿಂದ ನಾಲ್ಕು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಾಗಿವೆ. ಭೀಮನಳ್ಳಿ ವಲಯ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಬೇಕೆಂದು ಹೇಳಿದರು.
ಮಕ್ಕಳ ಸಾಹಿತ್ಯವು ಮಕ್ಕಳ ಮನಸ್ಸನ್ನು ರೂಪಿಸುವ ಅತ್ಯುತ್ತಮ ಸಾಧನವಾಗಿದೆ. ಕಥೆಗಳು, ಕವಿತೆಗಳು, ಹಾಡುಗಳು, ನಾಟಕಗಳು ಹಾಗೂ ಜೀವನ ಚರಿತ್ರೆಗಳು ಮಕ್ಕಳಲ್ಲಿ ಕಲ್ಪನಾಶಕ್ತಿ, ಸೃಜನಶೀಲತೆ, ಉತ್ತಮ ಮೌಲ್ಯಗಳು ಬೆಳೆಸುತ್ತವೆ. ಬದುಕಿನ ಮೌಲ್ಯಗಳು ಕಲಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಮಾತನಾಡಿ, ಕನ್ನಡ ಭಾಷೆ ಅದ್ಭುತ ಭಾಷೆ. ಸಾಹಿತ್ಯ ಮನುಷ್ಯನನ್ನು ಪರಿಶುದ್ಧ ಮಾಡುತ್ತದೆ. ತಾಲೂಕಿನಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕçತರ ಉಪನ್ಯಾಸ, ಜಾನಪದ ಕಲೆ ಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳು ಹಮ್ಮಿಕೊಳ್ಳಲಾಗುವುದು ಎಂದರು.
ನ್ಯಾಯವಾದಿ ಶಂಕರ ವಿಜಾಪುರಕರ್, ಹಿರಿಯ ಸಾಹಿತಿಗಳಾದ ಲಿಂಗಣ್ಣ ಮಲ್ಕನ್, ಪಂಚಾಕ್ಷರಿ ಪೂಜಾರಿ, ಆಲ್ ಇಂಡಿಯಾ ಬಂಜಾರ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಯಾಗಾಪುರ, ಶಿವಶಂಕರ ಮಾತನಾಡಿದರು.
ಕಸಾಪ ವಲಯ ಭೀಮನಳ್ಳಿ ವಲಯ ಅಧ್ಯಕ್ಷ ಲಿಂಗಪ್ಪ ಗೋಡೆಕರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಹಿರಿಯ ಸದಸ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ 29 ಮಕ್ಕಳು ಭಾಗವಹಿಸಿ ಕವನ, ಭಾವಗೀತೆ, ಮೋಹರಂ ಹಾಡು, ಕಥೆಗಳು, ಜೋಗುಳ ಪದ ಸೇರಿದಂತೆ ವಿವಿಧ ಹಾಡುಗಳು ಹಾಡಿ ರಂಜಿಸಿದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ತಾಪಂ ಮಾಜಿ ಉಪಾಧ್ಯಕ್ಷ ಶರಣಗೌಡ ಮಾದ್ವಾರ, ಕಸಾಪ ತಾಲೂಕು ಗೌರವ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಗೌರವ ಕಾರ್ಯದರ್ಶಿ ಸಂಗಮೇಶ ರೋಣದ, ಭೀಮನಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಅಪ್ಪಯ್ಯ ಹಿರೇಮಠ, ಜಾನಪದ ಪರಿಷತ್ತ ವಲಯ ಅಧ್ಯಕ್ಷ ರವಿ ಕಾಸಲ, ಪ್ರಮುಖರಾದ ಸುಭಾಷಗೌಡ ಪಸಾರ, ಬಸಣ್ಣಗೌಡ ತತ್ತರೆಡ್ಡಿ, ಬಸವರಾಜ ಪೂಜಾರಿ, ವೀರುಪಾಕ್ಷರೆಡ್ಡಿ ಕೊಳ್ಳಿ, ನಾಗಪ್ಪ ಜಡ್ಲ, ಬಸವರಾಜ ಕೊಳ್ಳಿ, ವೆಂಕಪ್ಪ, ಸಿರಲಿಂಗಪ್ಪ ನಾಟಿಕಾರ, ಬಸವರಾಜ ನಾಲವಾರ, ಕಲಾವಿದರಾದ ಮಹಾದೇವಮ್ಮ ಹೊಸಮನಿ, ತಿಮ್ಮರಾಯ ಕಾಮಣ್ಣ, ಮಲ್ಲಿಕಾರ್ಜುನ ನಾಶಿ, ಗುರುಲಿಂಗ ಮೋಟನಳ್ಳಿ, ಶಿಕ್ಷಕರಾದ ಬಸವರಾಜ ಗೊಳೆದ, ರಾಘವೇಂದ್ರ ಹಳ್ಳಿಪೇಟೆ, ರಾಜುಕುಮಾರ, ಗೀತಾ, ಖಾಸಿಂ ಅಲಿ, ದೇವಿಂದ್ರಪ್ಪ, ಸುನೀತಾ ಸೇರಿದಂತೆ ಇತರರಿದ್ದರು. ಸುಹಾನ ನಿರೂಪಣೆ ಮಾಡಿದರು, ರೂಪಾ ಸ್ವಾಗತಿಸಿದರು, ಭಾಗ್ಯಶ್ರೀ ವಂದಿಸಿದರು.

