Oplus_131072

ವಾಡಿ ಪಟ್ಟಣದಲ್ಲಿ ಅನಧಿಕೃತ ಲೇಔಟ್ ಗಳ ಅನುಮತಿ ರದ್ದುಪಡಿಸುವಂತೆ ಆಗ್ರಹಿಸಿ ಭಾಗಣ್ಣ ಧೋರಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ವ್ಯಾಪ್ತಿಯಲ್ಲಿ 2018 ರಿಂದ ಹಾಗೂ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಅನಧಿಕೃತ ಲೇಔಟ್‌ಗಳ ಅನುಮತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೋರಿ ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ವಾಡಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಲವಾರು ಲೇಔಟ್‌ ಗಳನ್ನು ಅಧಿಕಾರಿಗಳಿಂದ ಅನುಮತಿಗಳನ್ನು ಪಡೆಯದೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂಬುವುದು ಮಾಹಿತಿ ಇದೆ. ಪುರಸಭೆ ಮುಖ್ಯಾಧಿಕಾರಿಗಳು ಪ್ರಾಧಿಕಾರದಿಂದ ವಿನ್ಯಾಸ ಯೋಜನೆ ಅನುಮೋದನೆ, ಪಟ್ಟಣ ಯೋಜನಾ ಇಲಾಖೆಯಿಂದ ಅಗತ್ಯ, ವಲಯ ನಿಯಮಗಳು ಮತ್ತು ಕಟ್ಟಡ ಉಪ ಕಾನೂನುಗಳ ಅನುಸರಣೆ, ಒಳಚರಂಡಿ ರಸ್ತೆ ಪ್ರವೇಶ ನೀರು ಸರಬರಾಜು ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಸರಿಯಾದ ನಿಬಂದನೆಗಳು ಪಾಲನೆ ಮಾಡದೇ ಅಕ್ರಮ ಲೇಔಟ್ ಗಳು ತಲೆ ಎತ್ತಿವೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇಂತಹ ಅನಧಿಕೃತ ಅಭಿವೃದ್ಧಿಯು ಕರ್ನಾಟಕ ಪಟ್ಟಣದ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ಉಲ್ಲಂಘಿಸುವುದಲ್ಲದೆ ಆಸ್ತಿ ಖರೀದಿದಾರರು ಮತ್ತು ನಿವಾಸಿಗಳ ಸುರಕ್ಷತೆ ಮತ್ತು ಕಾನೂನು ಹಕ್ಕುಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ. ಆದಕಾರಣ ವಾಡಿ ಪಟ್ಟಣದ ಪ್ರಸ್ತುತ ತಮ್ಮ ಇಲಾಖೆಯಿಂದ ಅನುಮೋದನೆಗೊಂಡಿರುವ ಎಲ್ಲಾ ಲೇಔಟ್ ಗಳನ್ನು ಪರಿಶೀಲನೆ ಮಾಡಿ ಕಾನೂನು ಬಾಹಿರ ಇರುವ ಎಲ್ಲಾ ಲೇಔಟ್ ಗಳು ರದ್ದು ಮಾಡಬೇಕು. ನಾವು ಕಾನೂನುಬದ್ದ ಸಮರ್ಥ ಹಾಗೂ ಪಾರದರ್ಶಕ ಆಡಳಿತಕ್ಕೆ ಬದ್ಧರಾಗಿದ್ದೇವೆ. ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕ ಎಂದು ಆಗ್ರಹಿಸಿದರು.

ಮುಖ್ಯವಾಗಿ ಪ್ರಸ್ತುತ ಸರಕಾರದಿಂದ ನಡೆಯುತ್ತಿರುವ ಈ ಖಾತಾ ಅಭಿಯಾನದಲ್ಲಿ ಅಕ್ರಮ ಸ್ಥಳಗಳನ್ನು ಸಕ್ರಮವಾಗಿ ಮಾಡಬಾರದೆಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!