ವಾಡಿ ಪಟ್ಟಣದಲ್ಲಿ ಒಂದು ವಾರದಿಂದ ನೀರು ಸರಬರಾಜು ಮಾಡದ ಪುರಸಭೆ, ಸಾರ್ವಜನಿಕರ ಪರದಾಟ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಪುರಸಭೆ ನೀರು ಸರಬರಾಜು ಮಾಡದೇ ಇರುವುದರಿಂದ ಸಾರ್ವಜನಿಕರು ಕೊಡ ನೀರಿಗಾಗಿ ಪರದಾಡುವಂತಾಗಿದೆ, ಇಷ್ಟಾದರೂ ಮುಖ್ಯಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಕೆಲ ವಾರ್ಡಗಳಲ್ಲಿ ಕಳೆದ ಒಂದು ವಾರದಿಂದ ಕುಡಿಯಲು, ಬಳಸಲು ನೀರಿಲ್ಲ, ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಅದೇ ಹಳೆ ಉತ್ತರ ಮೋಟಾರ್ ಸಮಸ್ಯೆ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ನೀರಿನ ಸಮಸ್ಯೆ ಬರಬಾರದು ಎಂದು ಇಂಗಳಗಿ ಯಿಂದ ಎಸಿಸಿ ಕಂಪನಿಯ ಪೈಪ್ ಲೈನಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ 50 ಲಕ್ಷ ರೂಪಾಯಿಗಳು ವೆಚ್ಚದಲ್ಲಿ ಹೊಸ ಪೈಪ್ ಲೈನ್ ಮೂರು ವರ್ಷಗಳ ಹಿಂದೆಯೇ ಮಾಡಿದ್ದಾರೆ ಅದಕ್ಕೆ ಸಂಪರ್ಕ ಕಲ್ಪಿಸದೆ ನೀರಿನ ಸಮಸ್ಯೆ ಮುಂದುವರೆಸಿದ್ದಾರೆ. ಲಕ್ಷಾಂತರ ರೂಪಾಯಿ ಮೋಟಾರ್ ಪಂಪ್ ರಿಪೇರಿ, ಹೊಸ ಖರೀದಿ ಹೆಸರಲ್ಲಿ ಖರ್ಚು ಹಾಕಿ ಬಿಲ್ ಎತ್ತುವುದೇ ತಮ್ಮ ಕರ್ತವ್ಯಾಗಿಸಿದ್ದಾರೆ, ಆದರೆ ನೀರು ಕೊಡುವುದು ಮಾತ್ರ ಇವರಿಂದಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದರ ಬಗ್ಗೆ ಸಾಕಷ್ಟು ಸಲ ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಂಭಂದಿಸಿದ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇಂತಹ ಮಳೆಗಾಲದಲ್ಲಿ ನಮ್ಮ ಪಕ್ಕದಲ್ಲಿ ಎರಡೆರಡೂ ನದಿಗಳು ತುಂಬಿದ್ದರು, ನೀರಿಗಾಗಿ ಜನ ಪರಿತಪಿಸುವಂತೆ ಇಲ್ಲಿನ ಪುರಸಭೆಯವರು ಮಾಡುತ್ತಿದ್ದಾರೆ. ಜನರು ಒಂದು ವಾರದಿಂದ ಕೊಡಗಳಿಡಿದುಕೊಂಡು ಅಲ್ಲಲ್ಲಿ ಅಲೆಯುತ್ತಿದ್ದಾರೆ. ಮಂಜುರಾದ ಬೊರವೆಲ್ಲಗಳು, ದುರಸ್ಥಿ ಬೊರವೆಲ್ಲಗಳು ಮಾಯವಾಗಿವೆ ಇಂತಹ ಸಂಧರ್ಭದಲ್ಲಿ ಟ್ಯಾಂಕರ್ ಗಳ ಮೂಲಕವಾದರೂ ಜನರಿಗೆ ನೀರಿನ ವ್ಯವಸ್ಥೆ ಮಾಡವೇಕಾದ ಪುರಸಭೆ ಮುಖ್ಯಾಧಿಕಾರಿ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಜನ ಬೆಸತ್ತಿದ್ದು, ಪುರಸಭೆಗೆ ಬೀಗಹಾಕಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
