ವಾಡಿ ಪಟ್ಟಣಕ್ಕೆ ಎಂಎಲ್ಸಿ ಉಮಾಶ್ರೀ ಭೇಟಿ
ನಾಗಾವಿ ಎಕ್ಸಪ್ರೆಸ್
ವಾಡಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಿಮಿತ್ತ ಎಸ್ಐಆರ್ ಜಿಲ್ಲಾ ಉಸ್ತುವಾರಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ವಾಡಿ ಪಟ್ಟಣಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಹಾಗೂ ತೊಗರಿ ಮಂಡಳಿ ಅಧ್ಯಕ್ಷ ಮಹಿಮೂದ್ ಸಾಹೇಬ್ ಚಿಸ್ತಿ, ಕಾಂಗ್ರೆಸ್ ಮುಖಂಡರಾದ ನಾಗೇಂದ್ರ ಜೈಗಂಗಾ, ಬಾಬುಮಿಯ್ಯಾ, ಚಂದ್ರಶೇನ್ ಮೇನಗಾರ್, ಅಮೃತ್ ಕೊಮಟೆ, ಸೂರ್ಯಕಾಂತ್ ರದ್ದೆವಾಡಗಿ, ನಾಸಿರ್, ದೇವೇಗೌಡ, ಮಲ್ಲಯ್ಯ ಗುತ್ತೇದಾರ, ಸಿದ್ದು ಪೂಜಾರಿ, ರವಿ ಕೊಳಕೂರ್, ಮೈಬೂಬ್ ಸೇರಿದಂತೆ ಇತರರು ಇದ್ದರು.

