Oplus_0

ಐವತೈದು ಕೆ.ಜಿ ಭಾರದ ಚೀಲ (ಮೂಟೆ) ಹೊತ್ತ ಯುವಕ ಸುಕ್ಷೇತ್ರ ಅಯೋದ್ಯ ಪ್ರಭು ಶ್ರೀರಾಮನ ದರ್ಶನಕ್ಕೆ ಪಾದಯಾತ್ರೆ

ನಾಗಾವಿ ಎಕ್ಸಪ್ರೆಸ್ 

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ 27 ವರ್ಷದ ಯುವಕ ಕೇಧಾರನಾಥ ಕುಂಬಾರ ಶನಿವಾರ 55 ಕೆ.ಜಿ ತೂಕದ ಗೋದಿ ಚೀಲವೊಂದನ್ನು ಹೊತ್ತು ಅಯೋದ್ಯೆಗೆ ಪಾದಯಾತ್ರೆ ಮೂಲಕ ತೆರಳಿದರು.

ಇದಕ್ಕೂ ಮೊದಲು ಗ್ರಾಮದ ಶ್ರೀ ಹನುಮಾನ ಮಂದಿರದಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರು ಇವರ ಪಾದಯಾತ್ರೆ ಶುಭ ಕೋರಿ ಹಾರೈಸಿದರು.

ಅಂದಾಜು 1450 ಕಿ.ಮೀ ದೂರದ ಅಯೋದ್ಯೆಗೆ 45 ದಿನಗಳಲ್ಲಿ ತಲುಪುವ ನಿರೀಕ್ಷೆ ಇದೆ. ಇವರೊಂದಿಗೆ ಸಹೋದರ ಸಂಬಂದಿಯಾದ ವಿವೇಕ ಕುಂಬಾರವರು ಪಾದಯಾತ್ರೆ ಮೂಲಕ ಹೆಜ್ಜೆ ಹಾಕಲಿರುವರು ಜೊತೆಗೆ ಶ್ರೀ ಅರವಿಂದ ಪುರದಾಳ ಇವರು ಅಗತ್ಯ ವಸ್ತುಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವರು.

ಬೆಳಿಗ್ಗೆ 4 ರಿಂದ ದಿನಚರಿ ಪ್ರಾರಂಭವಾಗಿ ಬೆಳಿಗ್ಗೆ 15 ಕಿ.ಮೀ ಮಧ್ಯಾಹ್ನ 15 ಕಿ.ಮಿ ಪಾದಯಾತ್ರೆ ಮಾಡುವರು ಊಟ ತಿಂಡಿ ಆಯ ಊರಿನ ಭಕ್ತರನ್ನೇ ಅವಲಂಬಿಸಿರುವರು.

ಬಡ ಕೂಲಿ ಕಾರ್ಮಿಕನಾಗಿರುವ ಕೇಧಾರನಾಥ ಕುಂಬಾರ ಇದಕ್ಕೂ ಮೊದಲು ಶ್ರೀಶೈಲಗೆ ಎರಡು ಬಾರಿ 61 ಕೆ.ಜಿ. ತೂಕದ ಮೂಟೆಯೊಂದಿಗೆ ಹದಿನೈದು ದಿನಗಳ ಪಾದಯಾತ್ರೆ ಮಾಡಿರುವರು ಮತ್ತು ಎರಡು ಬಾರಿ ಹುಲಿಜಂತಿಗೆ ತರೆಳಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!