Oplus_0

ಮೋಟಾರ್ ಪಂಪ್ ಹಾಗೂ ಕೆಬಲ್ ಕಳ್ಳತನ ಆರೋಪಿಗಳ ಬಂಧನ, ಮುದ್ದೆಮಾಲು ಜಪ್ತಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಮೋಟಾರ್ ಪಂಪ್ ಹಾಗೂ ಕೆಬಲ್ ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಮುದ್ದೆಮಾಲು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

ಪಟ್ಟಣದ ಸಂತೋಷ ನಗರದ ಸೈಯದ್ ನಾಸೀರ್ ಬಶೀರಮೀಯಾ ನಂದಿಯಾಳ ರವರು ತಮ್ಮ ಪಾಲೀಶ್ ಮಶೀನದಲ್ಲಿನ 3 ಹೆಚ್.ಪಿ ಯ 3 ಮೋಟಾರ್ ಪಂಪಗಳು (60000 ಮೌಲ್ಯದ) ಕಳ್ಳತನವಾಗಿದ್ದು ಪತ್ತೆ ಮಾಡಿಕೊಡಬೇಕು ಎಂದು ಜು.2 ರಂದು ದೂರು ನೀಡಿದ್ದರಿಂದ ಚಿತ್ತಾಪುರ ಠಾಣೆಯಲ್ಲಿ ಗುನ್ನೆ ನಂ 98/2026 ಕಲಂ 331(4) 305(ಎ) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿ ಪತ್ತೆ ಕುರಿತು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಎಸ್.ಸಿ ಪಾಟೀಲ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ, ಎಎಸ್‌ಐ ಬಾಬು, ಸಿಬ್ಬಂದಿಗಳಾದ ಬಸವರಾಜ, ಅಜರೋದ್ದಿನ್, ಅಯ್ಯಣ್ಣ, ದತ್ತಾತ್ರೇಯ, ಮಂಜುನಾಥ, ಸಿದ್ಧರಾಮೇಶ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಕಾರ್ಯಪ್ರವೃತ್ತರಾದ ಸದರಿ ತಂಡವು ಪ್ರಕರಣದಲ್ಲಿಯ ಆರೋಪಿತರಾದ ಆಶ್ರಯ ಕಾಲೋನಿಯ ಮಂಜುನಾಥ@ ಅಂಜನೇಯ ತಂದೆ ಚಂದಪ್ಪ ಹೇಳವರ್, ಭೀಮಣ್ಣ ತಂದೆ ರಾಮಪ್ಪ ಹೇಳವರ್ ಇಬ್ಬರನ್ನು ಪತ್ತೆ ಮಾಡಿ ಕಳ್ಳತನ ಮಾಡಿದ 3 ಹೆಚ್.ಪಿ ಯ 3 ಮೋಟಾರ್ ಪಂಪಗಳನ್ನು (60000 ಮೌಲ್ಯದ) ವಶಪಡಿಸಿಕೊಳ್ಳಲಾಗಿದೆ.

ಸದರಿ ಕಾರ್ಯಾಚರಣೆಯಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಪ್ರಶಂಸಿರುತ್ತಾರೆ.

Spread the love

Leave a Reply

Your email address will not be published. Required fields are marked *

error: Content is protected !!