Oplus_0

ಚಿತ್ತಾಪುರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ, ಪ್ರಕರಣ ದಾಖಲು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬಳು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಸಂತೋಷ ನಗರದಲ್ಲಿ ಜು.2 ರಂದು ಸಂಭವಿಸಿದ್ದು ಜು.3 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಮಗಳು ರಮೀಜಾ ಇವಳಿಗೆ ಆಕೆಯ ಗಂಡ ಅಬ್ದುಲ್ ಹುಸೇನ್ ಶೇಖ್, ಅತ್ತೆ ಸಾಹೇರಾ ಬಾನು, ಗಂಡನ ಅಜ್ಜಿ ಹಪೀಜಾ, ಮತ್ತು ಅಣ್ಣನ ಹೆಂಡತಿ ನಿಶಾದ್ ಅಬ್ದುಲ್ ಗಫೂರ್ ಇವರೆಲ್ಲರೂ ನನ್ನ ಮಗಳಿಗೆ ವರದಕ್ಷಿಣೆಯಾಗಿ ಹಣ ಬಂಗಾರ ತರುವಂತೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದರಿಂದ ನನ್ನ ಮಗಳು ಜು.2 ರಂದು ಸಾಯಂಕಾಲ 4.30 ರಿಂದ 5 ಗಂಟೆಯ ಮಧ್ಯೆದಲ್ಲಿ ತನ್ನ ಮನೆಯಲ್ಲಿರುವ ವಿಷ ಕುಡಿದು ಮೃತಪಟ್ಟಿರುತ್ತಾಳೆ. ಅವಳ ಸಾವಿಗೆ ಕಾರಣರಾದ 4 ಜನರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಇಸ್ಮಾಯಿಲ್ ಮೆಹಬೂಬ್ ಅಲಿ ನಾಯ್ಕೋಡಿ ಸಾತನೂರ ದೂರು ನೀಡಿದ್ದಾರೆ.

ಅರ್ಜಿಯ ಸಾರಾಂಶದ ಮೇಲೆ ಗುನ್ನೆ ನಂ 101/2026 ಕಲಂ 80(2),85 ಸಂ 3(5) ಬಿಎನ್ಎಸ್ 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!