Oplus_0

ಚಿಂಚೋಳಿ (ಹೆಚ್) ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ | ರೈತರ ಧ್ವನಿಯಾಗಿ ಕೆಲಸ ಮಾಡಿ: ವೀರಣ್ಣ ಗಂಗಾಣಿ 

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಧ್ಯಕ್ಷ ಅಣವೀರ ಹೆಬ್ಬಾಳ ಆದೇಶದ ಮೇರೆಗೆ ಚಿಂಚೋಳಿ (ಹೆಚ್) ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.

ಚಿಂಚೋಳಿ (ಹೆಚ್) ಗ್ರಾಮದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಚಿಂಚೋಳಿ (ಹೆಚ್) ಗ್ರಾಮ ಘಟಕ ಅಧ್ಯಕ್ಷರಾಗಿ ಮಲ್ಲಿನಾಥ ತೇಲಿ, ಗೌರವಾಧ್ಯಕ್ಷರಾಗಿ ರಾಚಣ್ಣ ಸಾಹು ರ್ಯಾಕ್, ಉಪಾಧ್ಯಕ್ಷರಾಗಿ ಶಮ್ಮಿ ಫತೆಕ್, ಮಶಾಕ್ ಪಟೇಲ್, ರಾಜಣ್ಣ ಸಲಗರ್ ಅವರು ಆಯ್ಕೆಯಾಗಿದ್ದಾರೆ.

ಈ ವೇಳೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿ, ಆಳುವ ಸರ್ಕಾರಗಳ ಹಾಗೂ ಜನಪ್ರತಿನಿಧಿಗಳ ಕಣ್ಣು ತೆರೆಸುವ ಕೆಲಸ ಮಾಡುವ ನಿಟ್ಟಿನಲ್ಲಿ ರೈತರು ಸಂಘಟಿತರಾಗಬೇಕಿದೆ. ಹೀಗಾಗಿ ರೈತ ಸಂಘದ ನೂತನ ಪದಾಧಿಕಾರಿಗಳು ರೈತರ ಹಿತರಕ್ಷಣೆಗೆ ಸದಾ ಸಿದ್ಜರಾಗುವ ಮೂಲಕ ರೈತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ ರಮೇಶ್ ಹೆಬ್ಬಾಳ, ಮಲ್ಲು ಪಾಟೀಲ್, ಜಗನಾಥ್ ತೇಲಿ, ಹರೀಶ್ ಸಿಂಗೆ, ರಾಮು ಪವಾರ, ಮಲ್ಲು ಹೂಗಾರ್, ಮಹೇಶ್ ಚಿಂಚೋಳಿ, ಅಶೋಕ ಪೂಜಾರಿ, ವಿರೇಶ್ ಕಲಶಟ್ಟಿ, ನಾಗಬಸ್ಸು ಚೀದ್ರಿ, ತುಷಾರ ವಸ್ತ್ರದ್, ಬಸವರಾಜ ರೇವೂರ, ಜಗನ್ನಾಥ ತಂಗಡಗಿ, ರಮೇಶ ಹುಲ್ಲೂರ, ಚಂದ್ರಶೇಖರ ತಂಗಡಗಿ, ಅಶೋಕ ರೂಗಾಂಡ್, ವೀರಣ್ಣ ರತ್ನಶೆಟ್ಟಿ, ನಾಗರಾಜ ಶಿವನಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!