Oplus_256

ಶಹಾಬಾದ ಸಾಬಣ್ಣ ಸುಂಗುಲಕರ್ ವಯೋನಿವೃತ್ತಿ ಸಮಾರಂಭ | ಸುಂಗುಲಕರ್ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಹೆಸರಾದವರು: ಬಬಲಾದ್

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಸರ್ಕಾರಿ ನೌಕರರು ದೀರ್ಘಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುವವರು ತುಂಬಾ ಅಪರೂಪ ಅಂತಹದರಲ್ಲಿ 28 ವರ್ಷಗಳ ಕಾಲ ನಗರ ಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿ ಎಲ್ಲರ ವಿಶ್ವಾಸ ನಂಬಿಕೆ ಮತ್ತು ಸಹಕಾರದೊಂದಿಗೆ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ತಹಸೀಲ್ದಾರ್ ನೀಲಪ್ರಭಾ ಬಬಲಾದ್ ಹೇಳಿದರು.

ನಗರ ಸಭೆ ಆವರಣದಲ್ಲಿ ಶುಕ್ರವಾರ ನಗರಸಭೆ ಸಿಬ್ಬಂದಿ ಸಾಬಣ್ಣ ಸುಂಗುಲಕರ್ ಅವರ ವಯೋನಿವೃತ್ತಿ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಸುಂಗುಲಕರ್ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಹೆಸರಾದವರಾಗಿದ್ದು ಉತ್ತಮ ಸೇವಾವಧಿಯಲ್ಲಿ ಉತ್ತಮ ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿರುವ ಅವರ ಮುಂದಿನ ಜೀವನ ಸುಖ ಸಂತೋಷದಿಂದ ಸಾಗಲಿ ಎಂದು ಶುಭ ಹಾರೈಸಿದರು.

ನಗರ ಪೊಲೀಸ್ ಠಾಣೆ ಟಿಐ ಪರಶುರಾಮ ವನಂಜಕರ್ ಮಾತನಾಡಿ, ಮೂರು ದಶಕಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ ಸಾಬಣ್ಣ ಸುಂಗುಲಕರ್ ಅವರೂಪದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಕಾಡಾ ಅಧ್ಯಕ್ಷ ಡಾ. ಎಂ.ಎ ರಶೀದ್ ಮತ್ತು ಡಿಎಸ್ಎಸ್ ಮುಖಂಡ ಮರಿಯಪ್ಪ ಹಳ್ಳಿ ಅವರು ಮಾತನಾಡಿ, ನಗರಸಭೆ ಮತ್ತು ಸಾರ್ವಜನಿಕರ ಯಾವುದೇ ಕಾರ್ಯಕ್ರಮಗಳಾಗಲಿ, ಜಯಂತಿಗಳಾಗಲಿ ಪೂರ್ವ ಸಿದ್ಧತೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಮತ್ತು ಅನೇಕ ಪೌರಾಯುಕ್ತರು ನಗರಸಭೆ ಅಧ್ಯಕ್ಷರು ಸದಸ್ಯರುಗಳು ಕೈಕೆಳಗೆ ಕೆಲಸ ಮಾಡಿ ಮನ್ನಣೆ ಗಳಿಸಿದ್ದಾರೆ ಅವರ ವಯೋನಿವೃತ್ತಿ ಜೀವನ ಸುಖಕರವಾಗಿ ಇರಲಿ ಎಂದು ಹಾರೈಸಿದರು.

ಮೃತ್ಯುಂಜಯ ಸ್ವಾಮಿ ಹಿರೇಮಠ, ಸುರೇಶ್ ಮೆಂಗನ್, ಶಿವಪುತ್ರ ಕರಣಿಕ, ಎಸ್.ಪಿ ನಂದಗಿರಿ ಹಾಗೂ ಇತರರು ಮಾತನಾಡಿದರು.

ವೇದಿಕೆ ಮೇಲೆ ನಗರಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ್, ಡಿ.ಡಿ ಓಣಿ, ಶರಣು ಪಗಲಾಪೂನ, ನಿಂಗಣ್ಣ ಪುಜಾರಿ, ಮಲ್ಲಿಕಾರ್ಜುನ ಕಾಳಗಿ, ರವಿ ರಾಠೋಡ್, ಅಹ್ಮದ್ ಪಟೇಲ, ಹಾಸಮ್ ಖಾನ್, ಪುರುಷೋತ್ತಮ, ನಗರಸಭೆ ಸಿಬ್ಬಂದಿಗಳು ಹಾಗೂ ರಾಜೇಶ್ ಯನಗುಂಕಟಿಕರ, ಸಾಹೇಬಗೌಡ ಬೋಗುಂಡಿ, ಸೂರ್ಯಕಾಂತ ಕೋಬಾಳ, ಕಾಶಿನಾಥ್ ಜೋಗಿ, ಸಾಬೇರಾ ಬೆಗಂ, ಪಾರ್ವತಿ ಪವಾರ, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರಘುನಾಥ ನರಸಾಳೆ ನಿರೂಪಿಸಿದರು, ಶರಣಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!