ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ | ಬಸವರಾಜ ಪೂಜಾರಿ ಅವರಿಗೆ ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡುವಂತೆ ಮೋಗಲಾ ಗ್ರಾಮದ ಮುಖಂಡರ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಕಾಂಗ್ರೆಸ್ ಪಕ್ಷದ ಮತ್ತು ಕುರುಬ ಸಮಾಜದ ಮುಖಂಡ ಹಾಗೂ ಮೊಗಲಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಪೂಜಾರಿ ಅವರನ್ನು ರಾಜ್ಯದ ಯಾವುದಾದರೊಂದು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿ ಮೋಗಲಾ ಗ್ರಾಮದ ಮುಖಂಡರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಬಸವರಾಜ ಪೂಜಾರಿ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರಳು ಶ್ರಮಿಸುತ್ತಾ ಬಂದಿರುತ್ತಾರೆ. ಮೇಲಾಗಿ ಲೋಕಸಭೆ, ವಿಧಾನ ಸಭೆ, ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮಪಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿದ್ದಾರೆ.
ಆದರೂ ಪಕ್ಷದ ವತಿಯಿಂದ ಇಲ್ಲಿವರಿಗೆ ಇನ್ನೂ ಯಾವುದೇ ಒಂದು ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಈಗ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಬಸವರಾಜ ಪೂಜಾರಿ ಅವರನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಿ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೋಗಲಾ ಗ್ರಾಮದ ಮುಖಂಡರಾದ ನಾಗಣ್ಣಗೌಡ ಮಾಲಿ ಪಾಟೀಲ, ಗೂಳಿನಾಥ ಹಳಿಮನಿ, ಶಿವಶರಣಪ್ಪ ಹೂಗಾರ, ಈರಣ್ಣ ಕೊಡದೂರ, ಮಲ್ಲಿಕಾರ್ಜುನ ಪೂಜಾರಿ, ದೇವಿಂದ್ರಪ್ಪ ಅಲ್ಲೂರು, ರಾಜು ಕೆಂಪನೂರ, ಭಾಗಪ್ಪ ದೊರೆ, ರಮೇಶ್ ಪೂಜಾರಿ, ನಾರಾಯಣ ಗುತ್ತೇದಾರ, ಚಂದ್ರಕಾಂತ ದೊರೆ, ಗುರುಲಿಂಗ ಕೆಂಪನೂರ, ಗೌಸ್ ಮುಲ್ಲಾ, ಸುಭಾಷ್ ಚಿಂತಕುಂಟಿ, ಅಂಬರೀಷ್ ಜಂಬಗಿ, ವೀರಭದ್ರಪ್ಪ ಇವಣಿ, ಶಿವರಾಯ ಬೇಡರ್, ಭೀಮರಾಯ ದೊರೆ, ದಾವುದ್ ಲಡಾಫ್, ಮಹೇಶ್ ಹೂವಿನೋರ್, ಬಸವರಾಜ ಕೊಡದೂರ, ಶಿರಾದ್ದೀನ್ ಮುಲ್ಲಾ, ಮಹಾಂತೇಶ ನಾಯಕ ಅವರು ಉಪಸ್ಥಿತರಿದ್ದರು.

