ಮಾಲಗತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ರಚನೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ಮಾಲಗತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ರಚನೆ ಮಾಡಲಾಗಿದೆ ಎಂದು ಮುಖ್ಯಗುರು ಶಂಕರ ಜಾಧವ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಸೂರ್ಯಕಾಂತ ಕಟ್ಟಿ, ಉಪಾಧ್ಯಕ್ಷರಾಗಿ ರೀಯನಾಬೇಗಂ ಮಹೀಬೂಬ್ ಸರಗಾರ್, ಸದಸ್ಯರಾಗಿ ಈಶ್ವರ ಮುಗುಳನಾಗಾಂವ, ಸಂತೋಷಕುಮಾರ ಅಲ್ಲಿಪೂರಕರ್, ಮಲ್ಲಿಕಾರ್ಜುನ ಯರಗೋಳ, ಮಲ್ಲಪ್ಪ ತಳವಾರ, ಸಿದ್ದಪ್ಪ ಅಲ್ಲೂರ, ಗುಂಡಪ್ಪ ಅಲ್ಲೂರ, ರವಿ ಕುಮಸಿ, ದೇವಪ್ಪ ಕಟ್ಟಿ, ಶ್ರೀದೇವಿ ಮಲ್ಲಿಕಾರ್ಜುನ ಇಟಗಿ, ರಾಗೀಣಿ ಬಾಳಕ್, ಅಶ್ವಿನಿ ತಳವಾರ, ಮೀನಾಕ್ಷಿ ತಳ್ಳೋಳ್ಳಿ, ಕವಿತಾ ಕಟ್ಟಿ, ಚಂದಮ್ಮ ಹೊಸ್ಸುರ್, ಮಹಾದೇವಿ ಕಟ್ಟಿ, ಮೋನಮ್ಮ ಗೊಬ್ಬರ ಆಯ್ಕೆಯಾಗಿದ್ದಾರೆ.
ಎಸ್ಡಿಎಂಸಿ ನೂತನ ಪದಾಧಿಕಾರಿಗಳಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಣ್ಣ ಎಚ್.ಅಲ್ಲೂರ ಮಾಲಗತ್ತಿ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರಶೇಖರ ರಾವೂರಕರ್, ಮಲ್ಲಪ್ಪ ಅಲ್ಲೂರಕರ್, ಮಲ್ಲಿಕಾರ್ಜುನ ಇಟಗಿ, ಹಣಮಂತ ಬಾಳಕ್, ಮಲ್ಲು ಸಣಮೋ, ಕುಪೇಂದ್ರ ಕುನ್ನೂರ್, ಸುದಾರ್ಶನ್ ಎಂಟಮಾನ್, ವಿಜಯಕುಮಾರ್ ಕಟ್ಟಿ, ಗುಂಡಪ್ಪ ದಿಡ್ಡಿಮನಿ, ದೇವರಾಜ್ ಬಾಳಕ್ ಸೇರಿದಂತೆ ಇತರರು ಇದ್ದರು.

