ವಾಡಿ ಅಂಬಿಗರ ಚೌಡಯ್ಯ, ಮಾತಾ ಮಾಣಿಕೇಶ್ವರಿ ಸಮುದಾಯ ಭವನಗಳ ನಿರ್ಮಾಣಕ್ಕೆ 1 ಕೋಟಿ ಅನುದಾನ ಬಿಡುಗಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ 

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದ ಚೌಡೇಶ್ವರ ಕಾಲೋನಿ ವಾರ್ಡ್ ನಂ. 8 ರಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಹಾಗೂ ಮಾತಾ ಮಾಣಿಕೇಶ್ವರಿ ಹಳೆಯ ಕಟ್ಟಡದ ಸಮುದಾಯ ಭವನ ಕಡೆವಿ (ಡೆಮಾಲಿಶ್) 30×60 ಅಳತೆಯ ನಿವೇಶನದಲ್ಲಿ ಡುಪ್ಲೆಕ್ಸನಲ್ಲಿ (ಎರಡು ಭಾಗಗಳುಳ್ಳ) ಸಮುದಾಯ ಭವನಕ್ಕೆ ಈಗಾಗಲೇ 16 ಲಕ್ಷ ರೂಪಾಯಿ ಬಿಸಿಎಂ ಇಲಾಖೆಯಿಂದ ಮಂಜೂರಿಯಾಗಿದೆ ಆದರೆ ಇದು ಸರಿಹೋಗದೆ ಇರುವ ಕಾರಣ ಇನ್ನೂ 1 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋಲಿ ಸಮಾಜ ತಾಲೂಕು ಉಪಾಧ್ಯಕ್ಷ ನಾಗೇಂದ್ರ ಜೈ ಗಂಗಾ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ವಾರ್ಡ ನಂಬರ 8 ರಲ್ಲಿ ನಿರ್ಮಾಣಗೊಂಡಿರುವ ಹಳೆಯ ಕಟ್ಟಡ ನಿಜಶರಣ ಅಂಬಿಗರ ಚೌಡಯ್ಯನವರ ಹಾಗೂ ಮಾತಾ ಮಾಣಿಕೇಶ್ವರಿಯ ಸಮುದಾಯ ಭವನಗಳು ಸುಮಾರು ವರ್ಷದ ಹಳೆಯದಾಗಿ ಬಿರುಕು ಬಿಟ್ಟು ಮಳೆಗಾಲದಲ್ಲಿ ತುಂಬಾ ಸೋರುತ್ತಿದ್ದು ಹಾಗೂ ಚಿಕ್ಕದಾಗಿರುವುದರಿಂದ ಸಮಾಜದ ಬಾಂಧವರಿಗೆ ಸಭೆ ಸಮಾರಂಭಗಳನ್ನು ಮಾಡಲು ಬಹಳ ಅನಾನುಕೂಲವಾಗುತ್ತದೆ ಎಂದು ಹೇಳಿದರು.

ಸದರಿ ಕಾಮಗಾರಿ ನಿರ್ಮಾಣಕ್ಕಾಗಿ ಬಿ.ಸಿ.ಎಂ ಇಲಾಖೆಯಿಂದ ರೂ 16 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಸದರಿ ಕಾಮಗಾರಿಗೆ ಇನ್ನು 1 ಕೋಟಿ ರೂಪಾಯಿಗಳು ಅನುದಾನದ ಅವಶ್ಯಕತೆ ಇರುತ್ತದೆ. ಆದಕಾರಣ ನಿಜ ಶರಣ ಅಂಬಿಗರ ಚೌಡಯ್ಯ ಹಾಗೂ ಮಾತಾ ಮಾಣಿಕೇಶ್ವರಿನವರ ಹಳೆಯ ಕಟ್ಟಡದ ಸಮುದಾಯ ಭವನ ಕಡೆವಿ (ಡೆಮಾಲಿಸ) 30×60 ಅಳತೆಯ ನಿವೇಶನದಲ್ಲಿ ಡುಪ್ಲೆಕ್ಸನಲ್ಲಿ (ಎರಡು ಭಾಗಗಳುಳ್ಳ) ಸಮದಾಯ ಭವನಕ್ಕೆ 1 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಮಾಡಲು ಕೈಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತ ಎಎಸ್ಐ ಅಶೋಕ್ ಕಟ್ಟಿ, ವಿರುಪಾಕ್ಷಿ ಕೋಲಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!