ಚಿತ್ತಾಪುರದಲ್ಲಿ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ | 70 ಜನ ಕುರಿ ಮತ್ತು ಮೇಕೆ ಸಾಕಾಣಿಕೆದಾರರು ಭಾಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪಶುಪಾಲನಾ ಸಭಾಂಗಣದಲ್ಲಿ ಪಶುಪಾಲನಾ ಇಲಾಖೆ ಚಿತ್ತಾಪುರ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಕಲಬುರಗಿ ರವರ ಸಹಯೋಗದೊಂದಿಗೆ ಸೋಮವಾರ ಎರಡು ದಿನಗಳ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನಡೆಯಿತು.
ಸದರಿ ಕಾರ್ಯಕ್ರಮದಲ್ಲಿ ಚಿತ್ತಾಪುರ ತಾಲೂಕಿನ 70 ಜನ ಕುರಿ ಮತ್ತು ಮೇಕೆ ಸಾಕಾಣಿಕೆದಾರರು ಹಾಗೂ ಆಸಕ್ತಿ ಉಳ್ಳ ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುರಿ ಮೇಕೆಗಳಲ್ಲಿ ಮುಖ್ಯವಾಗಿ ಬರುವ ರೋಗಗಳ ಲಕ್ಷಣಗಳು, ಕುರಿ ಮತ್ತು ಮೇಕೆಗಳಿಗೆ ಮುಂಜಾಗ್ರತ ಕ್ರಮವಾಗಿ ನೀಡುವ ಲಸಿಕೆಗಳ, ಜಂತುನಾಶಕ ಔಷಧಿ, ವೈಜ್ಞಾನಿಕ ಕುರಿ ಸಾಕಾಣಿಕೆ, ಕುರಿ ಮತ್ತು ಮೇಕೆ ಶೆಡ್, ವಿವಿಧ ಕುರಿ ಮತ್ತು ಮೇಕೆ ತಳಿಗಳು ಮತ್ತು ಆಯ್ಕೆ, ಪಶು ಆಹಾರ ಬಗ್ಗೆ ನುರಿತ ಪಶು ವೈದ್ಯಧಿಕಾರಿಗಳವರಿಂದ ಉಪನ್ಯಾಸ ನೀಡಲಾಯಿತು.
ಕಲಬುರಗಿ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ದಯಾನಂದ ಹಕ್ಕಪಕ್ಕಿ ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣೆ, ಉಪನ್ಯಾಸಕರಾಗಿ ಡಾ. ಶರಣಬಸಪ್ಪ ಲಿಂಗದಳ್ಳಿ, ಡಾ. ಮಂಜುನಾಥ್, ಡಾ. ಅಭಿಲಾಶ್, ಡಾ. ಆಕಾಶ್ ಹಾಜರಿದ್ದರು. ಸಿಬ್ಬಂದಿ ವರ್ಗದವರಾದ ವೀರಣ್ಣ, ರತನ್ ಕುಮಾರ್, ವಿಜಯಕುಮಾರ್, ಅಜಯ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

