ಬೋಧಿ ಧಮ್ಮ ಜನಜಾಗೃತಿ ಯಾತ್ರೆಗೆ ಚಿತ್ತಾಪುರದಲ್ಲಿ ಅದ್ದೂರಿ ಸ್ವಾಗತ, ಯುವಕರಿಂದ ಬೈಕ್ ರ್ಯಾಲಿ | ಎಲ್ಲರನ್ನೂ ಜಾಗೃತಿ ಗೊಳಿಸುವುದೇ ಜನಜಾಗೃತಿ ಉದ್ದೇಶ: ಡಾ.ಶಾಕು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಂತಾರಾಷ್ಟ್ರೀಯ ಬೌದ್ಧ ಯುವ ಸಂ, ಭಾರತ್ ಗ್ಲೋಬಲ್ ಡಾ.ಅಂಬೇಡ್ಕರ್ ಬೌದ್ಧ ಮಿಷನ್, ಯುಎಸ್ಎ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಭಿಕ್ಕು ಸಂಘ ಮತ್ತು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ ಸನ್ನತ್ತಿ (ಕನಗನಹಳ್ಳಿ) ಇವರ ಸಂಯುಕ್ತಾಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 70 ನೇ ಬೌದ್ಧ ಧಮ್ಮ ದೀಕ್ಷಾ ಪ್ರಯುಕ್ತ ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಅಂತಾರಾಷ್ಟ್ರೀಯ ಬೌದ್ಧ ಧಮ್ಮ ದೀಕ್ಷಾ ಹಾಗೂ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ಚಿತ್ತಾಪುರ ಪಟ್ಟಣದ ಯರಗಲ್ ಕ್ರಾಸ್ ಹತ್ತಿರ ದಲಿತ ಮುಖಂಡರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿ ನಂತರ ಬೈಕ್ ರ್ಯಾಲಿ ಮೂಲಕ ಶಿಶು ವಿಹಾರ ಶಾಲೆ ರಸ್ತೆ, ಹೊಳಿಕಟ್ಟಾ, ಚಿತ್ತಾವಲಿ ವೃತ್ತ, ಕಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಅಂಬೇಡ್ಕರ್ ನಗರಕ್ಕೆ ತಲುಪಿ ಸಮಾವೇಶಗೊಂಡಿತ್ತು.
ರ್ಯಾಲಿಯಲ್ಲಿ ಭಾಗವಹಿಸಿದ ಯುವಕರಿಂದ ಜಯಘೋಷಗಳು ಮೊಳಗಿದವು. ನೀಲಿ ಧ್ವಜಗಳು, ಪಂಚಶೀಲ ಧ್ವಜಗಳು ರಾರಾಜಿಸಿದವು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಕು ಬೋಧಿಧಮ್ಮ, ಸಮತಾ, ಕರುಣೆ ಹಾಗೂ ಶಾಂತಿಯ ಸಂದೇಶ ಸಾರುವ ಧಮ್ಮ ಯಾತ್ರೆಯು 25 ನೇ ದಿನಕ್ಕೆ ಚಿತ್ತಾಪುರಕ್ಕೆ ತಲುಪಿದೆ. ಭಾನುವಾರ ಸನ್ನತ್ತಿ ಐತಿಹಾಸಿಕ ಸ್ಥಳದಲ್ಲಿ 5 ಲಕ್ಷ ಜನರಿಗೆ ಧಮ್ಮ ಧೀಕ್ಷೆ ನೀಡುವ ಉದ್ದೇಶವಿದೆ ಹೀಗಾಗಿ ಪ್ರತಿ ಮನೆಯಿಂದ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಜನಜಾಗೃತಿ ಯಾತ್ರೆ 18 ಜಿಲ್ಲೆ ಹೋಗಿದ್ದೇವೆ. ಮಂದಿರದಲ್ಲಿ ಕುಳಿತು ಕಾರ್ಯಕ್ರಮ ಮಾಡಿದ್ದೇವೆ. ಇನ್ನೂ ಮಂದಿರ ಬಿಟ್ಟಿಲ್ಲ ನಮ್ಮ ಜನರು, ಬಾಬಾಸಾಹೇಬರ ಆಶಯದಂತೆ ನಡೆಯುತ್ತಿಲ್ಲ ಅದರ ವಿರುದ್ಧ ಎಂದು ಬೇಸರ ವ್ಯಕ್ತಪಡಿಸಿದರು. ಅಂಬೇಡ್ಕರ್ ಸಾಹಿತ್ಯವನ್ನು ಹೆಚ್ಚೆಚ್ಚು ಓದಿ ಎಂದು ತಿಳಿಸಿದರು.
ಈ ಯಾತ್ರೆಯು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮನುಷ್ಯತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಜನಜಾಗೃತಿ ಉದ್ದೇಶ ಎಲ್ಲರನ್ನು ಜಾಗೃತಿ ಗೊಳಿಸುವುದು. ಮಲಗಿದ್ದವರನ್ನು ಎಬ್ಬಿಸಲು. ರಸ್ತೆಯಲ್ಲಿ ಬಾರದವರು ನ್ಯಾಯಕ್ಕಾಗಿ ಬಂದರು ಹೋರಾಡಲು. ಸಂವಿಧಾನ ಉಳಿಯಬೇಕು. ಲೋಕತಂತ್ರ ಉಳಿಯಬೇಕು. ಅಂಬೇಡ್ಕರ್ ವಾದಿಗಳು ಒಂದಾಗಬೇಕು ಎಂದು ಕರೆ ನೀಡಿದರು.
ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯ ಜೊತೆಗೆ ಪ್ರಬುದ್ಧ ಭಾರತ ನಿರ್ಮಾಣದ ಅಂತಿಮ ಆಶಯ ಬಾಬಾಸಾಹೇಬರದಾಗಿತ್ತು ಎಂದು ಹೇಳಿದರು.
ಈಗ ಟಾರ್ಗೆಟ್ ಮುಸ್ಲಿಂರು ಅಲ್ಲ ದಲಿತರು. ಹೀಗಾಗಿ ಈಗ ಶಕ್ತಿ ಪ್ರದರ್ಶನ ತೋರಿಸುವ ಸಮಯ ಬಂದಿದೆ. ಎಲ್ಲರೂ ಒಂದೇ ವೇದಿಕೆಯಡಿ ಬರಬೇಕು, ಬೇರೆ ಬೇರೆ ಆಗೋದು ಬೇಡ. ಮುಂಬರುವ ಪೀಳಿಗೆಗೆ ಜಾಗೃತರನ್ನಾಗಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಸವರಾಜ ಬೆಣ್ಣೂರಕರ್, ಶಿವರುದ್ರಪ್ಪ ಭೀಣ್ಣಿ, ಶಿವಕಾಂತ ಬೆಣ್ಣೂರಕರ್, ಶ್ರೀಕಾಂತ್ ಶಿಂಧೆ, ಮಲ್ಲಿಕಾರ್ಜುನ ಬೆಣ್ಣೂರಕರ್, ಜಗನ್ನಾಥ ಮುಡಬೂಳಕರ್, ಮಲ್ಲಿಕಾರ್ಜುನ ಮುಡಬೂಳಕರ್, ದೇವಿಂದ್ರ ಕುಮಸಿ, ಮಲ್ಲಿಕಾರ್ಜುನ ಕಾಳಗಿ, ರಾಜಣ್ಣ ಹುಂಡೇಕರ್, ರಮೇಶ್ ಕವಡೆ, ವಿಜಯಕುಮಾರ್ ದೊಡ್ಡಮನಿ, ಬಸವರಾಜ್ ಮುಡಬೂಳಕರ್, ನಾಗೇಂದ್ರ ಬುರ್ಲಿ, ಶಿವರಾಜ್ ಕಲ್ಲಕ್, ಸಂಜಯ್ ಬುಳಕರ್, ನಾಗರಾಜ್ ಓಂಕಾರ, ಲೋಹಿತ್ ಮುದ್ದಡಗಿ, ಕಾರ್ತಿಕ್ ಕಲ್ಲಕ್, ಭರತ್ ಹುಂಡೇಕರ್, ರಾಜು ಬುಳಕರ್, ಮಲ್ಲಿಕಾರ್ಜುನ ಕಲ್ಮರಿ, ಪರಶುರಾಮ ಆಗ್ಗಿ, ಆನಂದ ರಾವೂರಕರ್, ಅನಿಲ್ ರಾಠೋಡ, ಲಖನ್ ರಾಠೋಡ, ಬೀಮು ಹೋಳಿಕಟ್ಟಿ, ಶಿವಮೂರ್ತಿ ಯರಗಲ್, ಶರಣು ದಂಡೋತಿ, ಅಂಬರೀಷ್ ಮತ್ತಿಮುಡ್, ರಘು ಬಡೀಗೇರ್, ಶಿವರಾಜ್ ಕ್ಯಾಂಟಿ, ಶಿವಕುಮಾರ್ ಯಾದಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
