Oplus_0

ಶ್ರೀ ಕಲ್ಯಾಣ ಬಜಾಜ್ ಆಟೋ ರಿಕ್ಷಾ ಶೋರೂಂ ಉದ್ಘಾಟನೆ | ಚಿತ್ತಾಪುರ ತಾಲೂಕು ವ್ಯಾಪಾರ, ಕೈಗಾರಿಕೆಗಳಲ್ಲಿ ಅಭಿವೃದ್ಧಿ : ಮರಗೋಳ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಪಂ ಮಾಜಿ ಅಧ್ಯಕ್ಷ ರಮೇಶ್ ಮರಗೋಳ ಹೇಳಿದರು.

ಪಟ್ಟಣದ ಮಳಖೇಡ ರಸ್ತೆಯಲ್ಲಿ ಬುಧವಾರ ಶ್ರೀ ಕಲ್ಯಾಣ್ ಬಜಾಜ್ ಆಟೋ ರಿಕ್ಷಾ ಶೋರೂಂ  ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಚಿತ್ತಾಪುರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ, ಹಾಗಾಗಿ ಹಲವು ಉದ್ಯಮಗಳು ಪಾದಾರ್ಪಣೆ ಆಗಿವೆ. ಈ ನಿಟ್ಟಿನಲ್ಲಿ ಶ್ರೀ ಕಲ್ಯಾಣ ಬಜಾಜ್ ಆಟೋ ರಿಕ್ಷಾ ಶೋರೂಂ ಕಲಬುರಗಿ, ಬೀದರ್, ಯಾದಗಿರಿ, ಬಸವಕಲ್ಯಾಣ, ಶಹಾಪುರ, ಜೇವರ್ಗಿ ತಾಲೂಕುಗಳಲ್ಲಿ ಪ್ರಾರಂಭಿಸಿ ಪ್ರಸ್ತುತ ಚಿತ್ತಾಪುರ ತಾಲೂಕಿನಲ್ಲಿ ಹೊಸ ಶೋರೂಂ ಪ್ರಾರಂಭಿಸಿದೆ, ಇದೊಂದು ಅಭಿವೃದ್ಧಿಯ ಸಂಕೇತ ಎಂದು ಬಣ್ಣಿಸಿದರು.

ಆಟೋ ರಿಕ್ಷಾ ಖರೀದಿ ಮಾಡುವವರಿಗೆ ಇದೊಂದು ಸುವರ್ಣಾವಕಾಶ, ಸ್ಥಳೀಯವಾಗಿ ಬ್ಯಾಂಕ್ ಲೋನ್ ಸೌಲಭ್ಯ ಸಿಗಲಿದೆ ಹೀಗಾಗಿ ಇದರ ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಶ್ರೀ ಕಲ್ಯಾಣ ಬಜಾಜ್ ಆಡಳಿತಾಧಿಕಾರಿ ಅರುಣ್ ಭಟ್ ಮಾತನಾಡಿ, ಪಟ್ಟಣದ ಅಟೋ ರಿಕ್ಷಾ ಚಾಲಕರ ಅನುಕೂಲಕ್ಕಾಗಿ ಶ್ರೀ ಕಲ್ಯಾಣ ಬಜಾಜ್ ಆಟೋ ರಿಕ್ಷಾ ಶೋರೂಂ ಪ್ರಾರಂಭ ಮಾಡಲಾಗಿದೆ ಇದರ ಸದುಪಯೋಗ ಮಾಡಿಕೊಂಡು ಸದೃಢ ಜೀವನ ಸಾಗಿಸುವ ಮೂಲಕ ಶೋರೂಂ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ವಿದ್ಯಾಧರ ಬಟ್, ಸತ್ಯಾನಾಥ್ ಶೆಟ್ಟಿ, ಸಿದ್ದಲಿಂಗೇಶ್ವರ ಮತಾಡ್, ಮಲ್ಲಿಕಾರ್ಜುನ ರಾಜಗಿರೆ, ಶಿವಕುಮಾರ ನರೋಣಾ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಪಂಚ್ ಗ್ಯಾರಂಟಿ ಸಮಿತಿ ಸದಸ್ಯ ರವೀಂದ್ರ ರೆಡ್ಡಿ ಭಂಕಲಗಿ, ಮುಖಂಡರಾದ ಸಿದ್ದಣ್ಣಗೌಡ ಮಾಲಿ ಪಾಟೀಲ, ಆನಂದ ಪಾಟೀಲ ನರಿಬೋಳ, ಸಿದ್ದಣ್ಣಗೌಡ ದಿಗ್ಗಾಂವ, ಓಂಕಾರೇಶ್ವರ ರೇಷ್ಮಿ, ರವಿ ರೆಡ್ಡಿ ಭಂಕಲಗಿ, ರಾಜು ಗೋಣಿ, ನಾಗು ಮರಗೋಳ, ಅಂಬರೀಷ್ ಗುತ್ತೇದಾರ ಸೇರಿದಂತೆ ಆಟೋ ಚಾಲಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!