‘ಗಂಗಾ ನಿವಾಸ’ದ ಗೃಹಪ್ರವೇಶ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಎಂಎಲ್ಸಿ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ರಾಠೋಡ ಅವರಿಂದ ಶುಭಹಾರೈಕೆ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೂತನ ನಿವಾಸ ‘ಗಂಗಾ ನಿವಾಸ’ದ ಗೃಹಪ್ರವೇಶ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ ಅವರು ಭಾಗವಹಿಸಿ ಹೂಗುಚ್ಛ ನೀಡಿ ಶುಭಾಶಯಗಳನ್ನು ಕೋರಿದರು.

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಅತಿಥಿ ಗೃಹವನ್ನು ನವೀಕರಿಸಿ, ತಮ್ಮ ನೂತನ ಅಧಿಕೃತ ಸರ್ಕಾರಿ ನಿವಾಸವನ್ನಾಗಿ ಮಾಡಿಕೊಂಡಿದ್ದು, ಅದಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿದ್ದಾರೆ.

ನ. 16 ರಂದು ವಿಶೇಷ ಪೂಜೆ ಮತ್ತು ಹೋಮ-ಹವನಗಳೊಂದಿಗೆ ಗೃಹಪ್ರವೇಶ ಮಾಡಲಾಗಿದೆ. ನ.19 ರಂದು ‘ಗಂಗಾ’ ನಿವಾಸದಲ್ಲಿ ಸಂಪುಟ ಸಚಿವರು, ಶಾಸಕರು, ಸಂಸದರು ಮತ್ತು ಪರಿಷತ್ ಸದಸ್ಯರು ಸೇರಿದಂತೆ ಸುಮಾರು 500 ಗಣ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ.

Spread the love

Leave a Reply

Your email address will not be published. Required fields are marked *

You missed

error: Content is protected !!