Oplus_0

ಪದ್ಮಭೂಷಣ ಅನಂತನಾಗ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನ, ಇವರ ಗೌರವಾರ್ಥ ಅನಂತ ಪಯಣ ಸಂಗೀತ ಸಂಜೆ ಕಾರ್ಯಕ್ರಮ ನಾಳೆ 

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಶ್ರೀ ಮಹೇಶ್ ಕುಮಾರ್ ಅಭಿಮಾನಿ ಬಳಗ ಕರ್ನಾಟಕ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಪದ್ಮಭೂಷಣ ಅನಂತನಾಗ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದರಿಂದ ಇವರ ಗೌರವಾರ್ಥ ಅನಂತ ಪಯಣ ಸಂಗೀತ ಸಂಜೆ ಕಾರ್ಯಕ್ರಮ ಸೆ. 30 ರಂದು ಸಂಜೆ 6.30 ಕ್ಕೆ ಗೂಗಲ್ ಮೀಟ್ ನಲ್ಲಿ ಆಯೋಜಿಸಿದ್ದು ಎಲ್ಲರೂ ಭಾಗವಹಿಸಬೇಕು ಎಂದು ಸದಸ್ಯ ಶ್ರೀನಿವಾಸ.ಎಂ ತಿಳಿಸಿದ್ದಾರೆ.

ಗೌರವಧ್ಯಕ್ಷ ವೆಂಕಟೇಶ್ ಗಂಗಾವತಿ ಉದ್ಘಾಟಿಸುವರು, ಪೊಲೀಸ್ ಇಲಾಖೆಯ ಮರಿಯಪ್ಪ ಈಳಿಗೇರ್ ಕೊಪ್ಪಳ ಅಧ್ಯಕ್ಷತೆ ವಹಿಸುವರು, ನಿವೃತ್ತ ಶಿಕ್ಷಕ ಅಶೋಕ್ ಕುಮಾರ್ ಪ್ರಾರ್ಥನೆ ಮಾಡುವರು, ಸಂಗೀತದ ಮೂಲಕ ಕಲಾವಿದರ ಸ್ಮರಣೆ ಮತ್ತು ಸೌಹಾರ್ದತೆಯೊಂದಿಗೆ ಸಂಗೀತ ಸಂಭ್ರಮ ನಡೆಯಲಿದೆ.

ಕೊಪ್ಪಳ ಶಿಕ್ಷಣ ಇಲಾಖೆಯ ಜಗದೀಶ ಈಡಿಗ ಸ್ವಾಗತ ಮಾಡುವರು, ಸದಸ್ಯ ಶ್ರೀನಿವಾಸ.ಎಂ ನಿರೂಪಣೆ ಮಾಡುವರು, ಪೊಲೀಸ್ ಇಲಾಖೆಯ ಟಿ.ಎಸ್ ಮಂಜುನಾಥ ಚಿತ್ರದುರ್ಗ ವಂದನಾರ್ಪಣೆ ಮಾಡುವರು.

Spread the love

Leave a Reply

Your email address will not be published. Required fields are marked *

error: Content is protected !!