Oplus_0

ಸಂಘಟನ್‌ ಸೃಜನ್‌ ಅಭಿಯಾನ-2  ಸೆ.28 ರಿಂದ ಅಕ್ಟೋಬರ್ 31 ರವರೆಗೆ | ಕೈ ತಳಮಟ್ಟದ ಸಂಘಟನೆ ಪುನಾರಚನೆ: ಹರಿಪ್ರಸಾದ್ 

ನಾಗಾವಿ ಎಕ್ಸಪ್ರೆಸ್ 

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾದ್ಯಂತ ‘ಸಂಘಟನ್‌ ಸೃಜನ್‌ ಅಭಿಯಾನ-2’ ಹಮ್ಮಿಕೊಂಡಿದ್ದು, ಸೆ.28 ರಿಂದ ಅಕ್ಟೋಬರ್ 31ರ ಕಾಲಮಿತಿಯಲ್ಲಿ ಪಕ್ಷದ ತಳಮಟ್ಟದ ಸಂಘಟನೆಯನ್ನು ಬಲಪಡಿಸುವ ಹಾಗೂ ಮುಂಬರುವ ಪ್ರಮುಖ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜವಾಬ್ದಾರಿಗಳನ್ನು ನಿರ್ವಹಿಸಲು ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಈ ಅಭಿಯಾನದಡಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಸಮಿತಿ, ಪ್ರತಿ 10 ಬೂತುಗಳಿಗೆ ಒಬ್ಬರಂತೆ ಮಂಡಲ, ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಅಧ್ಯಕ್ಷರು ಮತ್ತು ಬೂತ್ ಸಮಿತಿಗಳ ಪುನಾರಚನೆಗೆ ಆದ್ಯತೆ ನೀಡಲಾಗಿದೆ.

ವೀಕ್ಷಕರು ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯ ಶಾಸಕರು, ಸಂಸದರು ಹಾಗೂ ಪ್ರಮುಖ ಮುಖಂಡರೊಂದಿಗೆ ವಿಸ್ತ್ರತ ಕಾರ್ಯಕಾರಿಣಿ ಸಭೆಗಳನ್ನು ನಡೆಸಿ, ಒಮ್ಮತದ ನಿರ್ಧಾರದ ಮೂಲಕ ಸಂಭಾವ್ಯ ಪಟ್ಟಿಯನ್ನು (ಕಡ್ಡಾಯವಾಗಿ ಒಬ್ಬ ಮಹಿಳೆ ಸೇರಿ ಕನಿಷ್ಠ 3ರಿಂದ ಗರಿಷ್ಠ 5 ಹೆಸರು) ಸಿದ್ಧಪಡಿಸಿ ಕೆಪಿಸಿಸಿಗೆ ಸಲ್ಲಿಸಬೇಕಿದೆ.

ಬ್ಲಾಕ್ ಅಧ್ಯಕ್ಷರ ಆಯ್ಕೆಗೆ 40 ರಿಂದ 60 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು, 5 ವರ್ಷಗಳನ್ನು ಪೂರೈಸಿದ ಎಲ್ಲ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಹಿಂದಿನ ‘ಸಂಘಟನ್ ಸೃಜನ್ ಅಭಿಯಾನ-1’ ರಲ್ಲಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳು ಹಾಗೂ 2023ರ ಪರಾಜಿತ ವಿಧಾನಸಭಾ ಅಭ್ಯರ್ಥಿಗಳು ಬ್ಲಾಕ್ ಅಧ್ಯಕ್ಷರಾಗ ಬಯಸಿದರೆ ಅವರನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಪಕ್ಷದಲ್ಲಿ ನಿಷ್ಕ್ರಿಯರಾಗಿರುವ ಹಿರಿಯ ನಾಯಕರನ್ನು ಗುರುತಿಸಿ ಕಾರಣಗಳನ್ನು ಪಟ್ಟಿ ಮಾಡುವ ಹಾಗೂ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಯುವಕರಿಗೆ ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸಲು ವಿಶೇಷ ಒತ್ತು ನೀಡಲಾಗಿದೆ.

ಸಭೆಗಳನ್ನು ರಾಜಕೀಯ ನಾಯಕರ ಮನೆ ಅಥವಾ ಕಚೇರಿಗಳಲ್ಲಿ ನಡೆಸದೆ, ಪಕ್ಷದ ಕಚೇರಿಗಳು ಅಥವಾ ಸಾರ್ವಜನಿಕ ಸಭಾಂಗಣಗಳಲ್ಲಿ ಮುಕ್ತವಾಗಿ ಆಯೋಜಿಸಬೇಕು. ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ, ಸಂದರ್ಶನಗಳ ಮೂಲಕ ನಾಯಕತ್ವವನ್ನು ಮೌಲ್ಯಮಾಪನ ಮಾಡಿ ಅ.31 ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೂಚನೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!