ಪಿಎಸ್ಐ ಆನಂದ ಕಾಶಿ ಸೇವೆ ಮೆಚ್ಚಿ ರಾಜ್ಯಪಾಲರಿಂದ ಪ್ರಶಂಸಾ ಪತ್ರ, ಚಿತ್ತಾಪುರಕ್ಕೆ ಕೀರ್ತಿ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ನಗರದ ವಿಧಾನಸೌಧ ಪೊಲೀಸ್ ಠಾಣೆಯ ಪಿಎಸ್ಐ ಆನಂದ ಕಾಶಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಂಸಾ ಪತ್ರ ನೀಡಿ ಶುಭ ಹಾರೈಸಿದ್ದಾರೆ. ಇದರಿಂದ ಚಿತ್ತಾಪುರಕ್ಕೆ ಕೀರ್ತಿ ಬಂದಂತಾಗಿದೆ.
ರಾಜಭವನಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಹಾಗೂ ಮಾಡಿದ ಪ್ರಯತ್ನಗಳು ಮತ್ತು ಕೆಲಸಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಉತ್ತಮವಾಗಿರಲು ನಾನು ಬಯಸುತ್ತೇನೆ ಮತ್ತು ಭವಿಷ್ಯವು ನಿಮಗಾಗಿ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಹಾಗೂ ನಿಮಗೆ ಅದೃಷ್ಟ ಮತ್ತು ಸಮೃದ್ಧಿ ದೊರೆಯಲಿ ಎಂದು ಪ್ರಶಂಸಾ ಪತ್ರದ ಮೂಲಕ ಶುಭ ಹಾರೈಸಿದ್ದಾರೆ.
ಚಿತ್ತಾಪುರ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ ಅವರ ಪುತ್ರ ಆನಂದ ಕಾಶಿ ಪಿಎಸ್ಐ ಆಗಿ ರಾಜಭವನಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವಾನ್ವಿತ ರಾಜ್ಯಪಾಲರರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಂಸಾ ಪತ್ರ ನೀಡಿದ್ದು ಅಭಿನಂದನಾರ್ಹ ಹಾಗೂ ಹರ್ಷವನ್ನುಂಟು ಮಾಡಿದೆ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹಾಗೂ ಅಲ್ಪಸಂಖ್ಯಾತರ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ನಜಿರೋದ್ದಿನ್ ಮುತ್ತುವಲಿ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಾಬಣ್ಣ ಕಾಶಿ ಅವರು ತಿಳಿಸಿದ್ದಾರೆ.