Oplus_131072

ದಲಿತ ಚಳುವಳಿಯ ನಾಯಕ ಡಿ.ಜಿ ಸಾಗರ ಅವರಿಗೆ ಎಂಎಲ್ಸಿ ಹುದ್ದೆ ನೀಡಿದ ಗೌರವ, ಇಡೀ ದಲಿತ ಸಮುದಾಯಕ್ಕೆ ನೀಡಿದಂತಾಗಿದೆ: ರವಿ ಬಡಿಗೇರ್ ಹರ್ಷ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲ್ಯಾಣ ಕರ್ನಾಟಕದ ದಲಿತ ಲೋಕದ ಧ್ರುವತಾರೆ ಎಂದೇ ಖ್ಯಾತಿ ಪಡೆದುಕೊಂಡಿರುವ ಸುಧೀರ್ಘವಾಗಿ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೇಳ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟ ಸಾಮಾಜಿಕ ನ್ಯಾಯದ ಹರಿಕಾರರು ಮತ್ತು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ ಅವರಿಗೆ ಮಾತು ಕೊಟ್ಟಂತೆ ಎಂಎಲ್ಸಿ ಹುದ್ದೆ ನೀಡಿ, ಕಾಂಗ್ರೆಸ್ ಪಕ್ಷವು ನಿಜವಾಗಲೂ ಒಬ್ಬ ದಲಿತ ಚಳುವಳಿಯ ನಾಯಕನಿಗೆ ನೀಡಿದ ಗೌರವ ಇಡೀ ದಲಿತ ಸಮುದಾಯಕ್ಕೆ ನೀಡಿದಂತಾಗಿದೆ ಎಂದು ಡಿಎಸ್ಎಸ್ ತಾಲೂಕು ಸಂಚಾಲಕ ರವಿ ಬಡಿಗೇರ್ ಹರ್ಷ ವ್ಯಕ್ತಪಡಿಸಿದ್ದಾರೆ.

ದಲಿತ ಹೋರಾಟಗಾರರಾದ ಡಿ.ಜಿ.ಸಾಗರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಹಾಗೂ ಸಚಿವರಾದ ಎಚ್. ಸಿ. ಮಹಾದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಅವರಿಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಚಿತ್ತಾಪುರ ತಾಲೂಕು ಸಮಿತಿ ವತಿಯಿಂದ ಹಾರ್ದಿಕ ಅಭಿನಂದನೆಗಳು ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!