Oplus_131072

ಬಿಜೆಪಿ ವಕ್ತಾರ ಹಣಮಂತ ಇಟಗಿ ಆರೋಪ, ಖಟಾಖಟ್ ಹಣ ನೀಡುವುದಾಗಿ ಆಮಿಷವೊಡ್ಡಿದ ರಾಹುಲಗಾಂದಿ, ಸರ್ಕಾರದ ಮೂಲಕ ಜನರಿಂದ ಖಟಾಖಟ್ ಹಣ ವಸೂಲಿಗೆ ಸಾಕ್ಷಿ ಕೊಟ್ಟ ಹಿರಿಯ ಶಾಸಕ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಕರ್ನಾಟಕದ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಬ್ರಷ್ಟಾಚಾರದ ಮುಖವಾಡ ಮತ್ತೆ ಕಳಚಿಬಿದ್ದಿದೆ. ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂದಿ ಹೇಳುವ ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ಖಟಾಕಟ್ ನಡೆದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ನಗರಸಭೆ ಸದಸ್ಯ ಹಣಮಂತ ಇಟಗಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಓಲೈಕೆಗಳು ಜೊತೆಯಾಗಿ ಮುಂದಡಿ ಇಡುತ್ತಿವೆ ಎನ್ನಲು ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿನ ಬೇರು ಬಿಟ್ಟ ಭ್ರಷ್ಟಾಚಾರವನ್ನು ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ರು ಅಧಿಕಾರಿಗಳ ಜೊತೆ ನಡೆಸಿದ ಸಂಭಾಷಣೆಯ ಆಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಬಡವರಿಗೆ ನೀಡುವ ಆಶ್ರಯ ಮನೆಗಳ ಹಂಚಿಕೆಗೂ ಬಿಡದೇ ಲಂಚವನ್ನು ಬಹಿರಂಗವಾಗಿ ಕೇಳಲಾಗುತ್ತದೆ ಎಂಬುದನ್ನು ಬಿ.ಆರ್. ಪಾಟೀಲ್ ರು ಸ್ವತಃ ಸಚಿವ ಜಮೀರ್ ಖಾನ್ ಅವರ ಪಿಎ ಜೊತೆ ಸಂಭಾಷಣೆಯಲ್ಲಿಯೇ ಸ್ಪಷ್ಟಪಡಿಸಿಕೊಂಡಿದ್ದು ಅದನ್ನು ಸಾರ್ವಜನಿಕವಾಗಿ ವೈರಲ್ ಮಾಡಿರುವುದು ಬ್ರಷ್ಟ ಕಾಂಗ್ರೆಸ್ ನ ಕರಾಳ ಮುಖ ಮತ್ತೆ ಮತ್ತೆ ಬಯಲಾಗಿದೆ ಎಂದು ಇಟಗಿ ಆರೋಪಿಸಿದ್ದಾರೆ.

ಲಂಚ ನೀಡದ ಕಾರಣಕ್ಕಾಗಿ, ಅವರು ಅಧಿಕೃತವಾಗಿ ಶಿಫಾರಸು ಮಾಡಿದ ಪತ್ರಗಳನ್ನು ಸಹ ಕಸದ ಬುಟ್ಟಿಗೆ ಹಾಕಲಾಗಿದೆ ಎಂಬುದು ಸ್ವತಃ ಬಿ.ಆರ್. ಪಾಟೀಲ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ಪಿಎ ಅವರೊಂದಿಗೆ ನಡೆಸಿದ ಸಂಭಾಷಣೆಯೇ ರಾಜಾರೋಷವಾಗಿ ವಾಸ್ತವದಲ್ಲಿ ಈ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮುಖವನ್ನು ಅನಾವರಣ ಮಾಡಿದೆ.

ಯಾವುದೇ ಕೆಲಸಕ್ಕೂ ಹಣ ಕೊಡಬೇಕು ಹಣ ಕೊಡದೇ ಇದ್ದರೆ ಶಾಸಕರು ಸಚಿವರ ಪತ್ರಗಳಿಗೂ ಕವಡೆ ಕಿಮ್ಮತ್ತಿಲ್ಲದಂತೆ ಮಾಡಿದ ಇಂತಹ ಭ್ರಷ್ಟ ಸರ್ಕಾರ ಈ ಹಿಂದೆ ಎಂದೆಂದೂ ಎಲ್ಲೂ ಕಂಡಿಲ್ಲ ಎಂದು ಇಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂದಿಯವರ ‘ಖಟಾಖಟ್’ ಎಂದು ಜನರಿಗೆ ಹಣ ಎಣಿಸುವುದಾಗಿ ಹೇಳಿ ಈದೀಗ ಜನರಿಂದ ಖಟಾಕಟ್ ಹಣವನ್ನು ಈ ಬ್ರಷ್ಟ ಸರ್ಕಾರದಿಂದ ವಸೂಲಿ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅರಿಯಬೇಕಾಗಿದೆ.

ಇಂತಹ ಭ್ರಷ್ಟ ನೀಚ ಸರ್ಕಾರದ ಕೃತ್ಯಗಳನ್ನು ಜನತೆ ಇನ್ನು ಮೂರು ವರ್ಷ ಸಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಜನತೆಗೆ ಖಟಾಖಟ್ ಆಮಿಷವೊಡ್ಡಿದ ರಾಹುಲಗಾಂದಿ ‘ಖಟಾಕಟ್’ ಬ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿರುವುದು ಈ ಘಟನೆಯಿಂದ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಅವರು ಟೀಕಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!