ಚಿತ್ತಾಪುರ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ ಅವರಿಗೆ ಕಂಬಳೇಶ್ವರ ಶ್ರೀಗಳಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸೋಮಶೇಖರ ಕರದಳ್ಳಿ ಅವರು ಪಟ್ಟಣದ ಕಂಬಳೇಶ್ವರ ಮಠಕ್ಕೆ ಮಂಗಳವಾರ ಭೇಟಿ ಮಾಡಿ ಪೂಜ್ಯ ಸೋಮಶೇಖರ ಶಿವಾಚಾರ್ಯರಿಗೆ ಗೌರವಿಸಿ ಆಶೀರ್ವಾದ ಪಡೆದುಕೊಂಡರು.
ಶ್ರೀಗಳು ಸಹ ನೂತನ ಅಧ್ಯಕ್ಷರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಯುವ ನ್ಯಾಯವಾದಿ ಪ್ರಸಾದ್ ಅವಂಟಿ, ಪತ್ರಕರ್ತ ಅಣ್ಣಾರಾಯ ಇವಣಿ ಇದ್ದರು.

