Oplus_131072

ಚಿತ್ತಾಪುರದಲ್ಲಿ ಪತ್ರಿಕಾ ದಿನಾಚರಣೆ | ಪತ್ರಿಕೆಗಳ ಓದುಗರ ಸಂಖ್ಯೆ ಕುಸಿದಿಲ್ಲ ಬದಲಿಗೆ ಹೆಚ್ಚಾಗಿದೆ: ಯಡ್ರಾಮಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪತ್ರಿಕೆಗಳು ಓದುವಿಕೆಯ ಖುಷಿ ನೀಡುತ್ತವೆ ಹಾಗೂ ಜನರ ವಿಶ್ವಾಸಕ್ಕೆ ಹತ್ತಿರ ಆಗಿವೆ, ಪತ್ರಿಕೆಗಳು ಜ್ಞಾನದ ಬುತ್ತಿಯಾಗಿದ್ದು ಮರಳಿ ಪ್ರವರ್ಧಮಾನಕ್ಕೆ ಬರುತ್ತಿವೆ ಹೀಗಾಗಿ ಪತ್ರಿಕೆಗಳು ಯಾವತ್ತೂ ಮುಚ್ಚುವುದಿಲ್ಲ ಓದುಗರ ಸಂಖ್ಯೆ ಕುಸಿದಿಲ್ಲ ಬದಲಿಗೆ ಹೆಚ್ಚಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಹಾಗೂ ಪ್ರಜಾಪ್ರಭುತ್ವದ ಕಾವಲು ನಾಯಿ, ಆದರೆ ಇಂದು ಅನೇಕ ಸಂಕಷ್ಟ ಹಾಗೂ ಸವಾಲುಗಳು ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು ಸಾಮಾಜಿಕ ಜವಾಬ್ದಾರಿಯನ್ನು ಮೆರೆಯದೆ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿ ಆಳುವ ವರ್ಗಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಪತ್ರಕರ್ತರೇ ಪತ್ರಿಕೆಗಳ ಜೀವಾಳ ಅವರಿಗೆ ಸಾಕಷ್ಟು ಸಮಸ್ಯೆಗಳಿವೆ. ಈಗ ಹೋರಾಟದ ಪರಿಣಾಮವಾಗಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಯಾಗಿದೆ ಎಂದರು.

ವಿಶೇಷ ಉಪನ್ಯಾಸಕರಾಗಿ ಡಾ.ಚಂದ್ರಗಿರೀಶ್ ರಾಯಚೂರು ಮಾತನಾಡಿ, ಪ್ರಜಾತಂತ್ರದ ನಾಲ್ಕನೇ ಸ್ತಂಭವಾಗಿದ್ದ ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಹಲವಾರು ಸವಾಲುಗಳನ್ನು ಎದುರಿಸುತ್ತ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಪತ್ರಿಕೆಗಳು ಇವತ್ತಿಗೂ ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದು ಹೇಳಿದರು. ಸರ್ಕಾರ ಪಂಚ ಗ್ಯಾರಂಟಿಗಳು ಮಾಡಿದಂತೆ ಪತ್ರಕರ್ತರಿಗೂ ಒಂದು ಗ್ಯಾರಂಟಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಅವರು ಮಾತನಾಡಿದರು.

ಡಾ.ಶಂಕರ ಕಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಸಿಪಿಐ ಚಂದ್ರಶೇಖರ ತಿಗಡಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ವೇದಿಕೆಯಲ್ಲಿದ್ದರು. ಸಿದ್ದುಗೌಡ ಅಫಜಲಪುರ, ನಾಗರಾಜ ಭಂಕಲಗಿ, ಅಯ್ಯಪ್ಪ ರಾಮತೀರ್ಥ, ನಾಗರೆಡ್ಡಿ ಗೋಪಸೇನ್, ಅರ್ಜುನ್ ಗಂಗಾಣಿ, ಸೂರ್ಯಕಾಂತ ರದ್ದೇವಾಡಿ, ಹರಿಶ್ಚಂದ್ರ ಕರಣಿಕ್, ವೀರಣ್ಣ ಯಾರಿ, ಸಿದ್ದಲಿಂಗ ಬಾಳಿ, ಸುನೀಲ್ ಗುತ್ತೇದಾರ, ಸಾಬಣ್ಣ ಅಣಮಿ, ಶರಣು ಹೇರೂರು, ಸಿದ್ದು ಪೂಜಾರಿ ಸೇರಿದಂತೆ ಪತ್ರಕರ್ತರಾದ ವಿರೇಂದ್ರ ಕೊಲ್ಲೂರ, ಕಾಶಿನಾಥ ಗುತ್ತೇದಾರ, ರವಿಶಂಕರ ಬುರ್ಲಿ, ವಿಕ್ರಮ್ ತೇಜಸ್, ಎಂ.ಡಿ ಮಶಾಕ, ಜಗದೇವ ಕುಂಬಾರ, ಅನಂತನಾಗ ದೇಶಪಾಂಡೆ, ದಯಾನಂದ ಖಜುರಿ, ವಾಸು ಚವ್ಹಾಣ,  ಸಂತೋಷಕುಮಾರ ಕಟ್ಟಿಮನಿ, ಅಣ್ಣಾರಾಯ ಇವಣಿ, ಚಂದ್ರಶೇಖರ ಬಳ್ಳಾ ಇತರರು ಉಪಸ್ಥಿತರಿದ್ದರು.

ಡಾ.ಸಾಯಬಣ್ಣ ಗುಡುಬಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು, ಮಡಿವಾಳಪ್ಪ ಹೇರೂರು ನಿರೂಪಿಸಿದರು, ರಾಯಪ್ಪ ಕಮರವಾಡಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!