Oplus_0

ಚಿತ್ತಾಪುರ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳ ತಂಡ ಭೇಟಿ | ಬೀಜ ರಸಗೊಬ್ಬರ ಮತ್ತು ಕೀಟನಾಕಗಳನ್ನು ನಿಗದಿತ ದರದಲ್ಲಿಯೆ ಮಾರಾಟ ಮಾಡಲು ಸೂಚನೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಸೇಡಂ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಅನುಸುಯಾ ಹೂಗಾರ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಪಿಎಸ್ಐ ಚಂದ್ರಾಮಪ್ಪ  ಮತ್ತು ಕೃಷಿ ಅಧಿಕಾರಿಗಳಾದ ರವಿಂದ್ರ ಕುಮಾರ, ಕರಣ ಕುಮಾರ ಮತ್ತು ಇತರೆ ಅಧಿಕಾರಗಳ ತಂಡ  ಶುಕ್ರವಾರ ದಿಢೀರ್ ಬೇಟಿ ನಿಡಿ ತಪಾಸಣೆ ಕೈಗೊಂಡರು.

ಮೊದಲಿಗೆ ಕೃಷಿ ಪರಿಕರ ಮಾರಾಟ ಮಳಿಗೆಗಳಾದ ನಮ್ಮ ಗ್ರೋಮರ್ ಸೆಂಟರನ ಗೋದಾಮು ವೀಕ್ಷಣೆ ಮಾಡಿ ಗೊಬ್ಬರದ ದಾಸ್ತಾನು ಪರಿಶೀಲಿಸಿ ರೈತರಿಗೆ ನಿಯಮಿತವಾಗಿ ಡಿಎಪಿ ಮತ್ತು ಇತರೆ ಗೊಬ್ಬರಗಳನ್ನು ವಿತರಿಸಲು ಸೂಚಿಸಿದರು. ಮತ್ತು ನ್ಯಾನೊ ಡಿಎಪಿ ಮತ್ತು ನ್ಯಾನೊ ಯುರಿಯಾ ಬಳಕೆ ಕುರಿತು ಮಾಹಿತಿ ನೀಡಿದರು. ನಂತರ ಇತರೆ ಮಾರಾಟ ಮಳಿಗೆಗಳಾದ ಜೈ ಕಿಸಾನ ಮಹಾಲಕ್ಷ್ಮಿ ಆಗ್ರೋ ಕೇಂದ್ರ, ವಿಶ್ವ ಗುರು ಟ್ರೇಡರ್ಸ, ಇಂಡಿಯನ್ ಅಗೋ ನೀಡ್ಸ್ ಮಾರಾಟ ಮಳಿಗೆಗಳಿಗೆ ಬೇಟಿ ನೀಡಿ ಬಿಲ್ ಪುಸ್ತಕ ರೇಟ್ ಬೋರ್ಡ್, ಪಾರಂ ನಂ-ಓ ಗಳನ್ನು ಪರಿಶೀಲಿಸಿದರು.

ಬೀಜ ರಸಗೊಬ್ಬರ ಮತ್ತು ಕೀಟನಾಕಗಳನ್ನು ನಿಗದಿತ ದರದಲ್ಲಿಯೆ ಮಾರಾಟ ಮಾಡಲು ಸೂಚಿಸಿದರು. ಒಂದು ವೇಳೆ ರೈತರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!