ಮೊಗಲಾ ವಿದ್ಯುತ್ ಪರಿವರ್ತಕ ಘಟಕ ಉದ್ಘಾಟನೆ, ಬನ್ನೇಶ ಸುಲೇಗಾಂವ ಸಾಮಾಜಿಕ ಸೇವೆ ಮೆಚ್ಚುವಂಥದ್ದು: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮ ಪಂಚಾಯಿತಿ ಸದಸ್ಯ ಬನ್ನೇಶ ಸುಲೇಗಾಂವ ಅವರ ಸಾಮಾಜಿಕ ಸೇವೆ ಮೆಚ್ಚುವಂಥದ್ದು ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮೊಗಲಾ ಗ್ರಾಮದ ಸೀಮಿ ಮರಗಮ್ಮ ದೇವಸ್ಥಾನದದ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬನ್ನೇಶ ಸುಲೇಗಾಂವ ಅವರ ಸ್ವಂತ ಖರ್ಚಿನಲ್ಲಿ ಕೈಗೊಂಡ ಹೊಸ ಟ್ರಾನ್ಸ್ ಫಾರಂ “ವಿದ್ಯುತ್ ಪರಿವರ್ತಕ ಘಟಕ” ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ದುಡಿಮೆಯ ಜೊತೆಗೆ ಸಮಾಜಕ್ಕೆ ಉಪಯುಕ್ತವಾದ ಬೆಳಕಿನ ಸೌಲಭ್ಯ ಒದಗಿಸಿದ್ದ ಬನ್ನೇಶ ಅವರ ಸೇವೆ ಅಮೋಘವಾಗಿದೆ ಎಂದು ಬಣ್ಣಿಸಿದರು.
ಸರ್ಕಾರದ ವತಿಯಿಂದ ಬೆಳಕಿನ ವ್ಯವಸ್ಥೆ ಮಾಡಲು ಆಗುವುದಿಲ್ಲ ಅಂತಹದರಲ್ಲಿ ತಮ್ಮ ವೈಯಕ್ತಿಕ ಅಂದಾಜು 1 ಲಕ್ಷದ ಹಣ ಖರ್ಚು ಮಾಡಿ ವಿದ್ಯುತ್ ಪರಿವರ್ತಕ ಘಟಕ ಕೂಡಿಸಿ ಹೈಮಾಸ್ಟ್ ದೀಪ ಅಳವಡಿಸಿ ಈ ಭಾಗದಲ್ಲಿ ಕತ್ತಲೆಯನ್ನು ಹೊಡೆದೋಡಿಸಿ ಬೆಳಕಿನ ಭಾಗ್ಯ ಕಲ್ಪಿಸಿ ಭಯದ ವಾತಾವರಣ ದೂರಮಾಡಿದ ಕೀರ್ತಿ ಬನ್ನೇಶ ಸುಲೇಗಾಂವ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಂಚಗಾರಹಳ್ಳ ಶ್ರೀ ಮಲ್ಲಯ್ಯ ಸ್ವಾಮಿ ಸ್ಥಾವರಮಠ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಧಾನ ಧರ್ಮ ಮಾಡುವ ಜನರು ಇರುವ ಊರುಗಳಲ್ಲಿ ಶಾಂತಿ ಸಮೃದ್ಧಿ ನೆಲೆಸಲಿದೆ ಎಂದು ಹೇಳಿದರು. ಸಮಾಜಕ್ಕೆ ಒಳ್ಳೆಯ ಕೆಲಸ ಕಾರ್ಯಗಳು ಮಾಡುವವರಿಗೆ ಯಾವತ್ತೂ ಸಹಕಾರ ಮಾಡಬೇಕು ಹಾಗೂ ಅವರು ಮಾಡುವ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದು ಕಿವಿಮಾತು ಹೇಳಿದರು. ಬನ್ನೇಶ ಸುಲೇಗಾಂವ ಸಮಾಜಕ್ಕೆ ಉಪಯೋಗ ಆಗುವಂತಹ ಬೆಳಕಿನ ಸೌಲಭ್ಯ ಒದಗಿಸಿದ್ದು ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿದರು. ಪೀರಪ್ಪ ನಾಯ್ಕಲ್, ಲಖನ್ ರಾಠೋಡ, ರೇವಣಸಿದ್ದಪ್ಪ ಯದಲಾಪೂರ, ಗೂಳಿನಾಥ ಸಾಹುಕಾರ, ಶರಣು ತೊನಸನಳ್ಳಿ, ಮಲ್ಲಿಕಾರ್ಜುನ ಪೂಜಾರಿ, ಶಿವಶರಣಪ್ಪ ಹೂಗಾರ, ಮಲ್ಲಿಕಾರ್ಜುನ ಠಾಣಾಗುಂದಿ, ಕುಮಾರ್, ರಮೇಶ್ ಪೂಜಾರಿ, ನಾರಾಯಣ ಕಲಾಲ, ದೇವಿಂದ್ರಪ್ಪ ಅಲ್ಲೂರ, ನೀಲಕಂಠ ಪವಾರ, ರವಿ ರಾಠೋಡ, ಗಂಗಾಧರ್ ಡಿಗ್ಗಿ, ರಾಜು ದೊರೆ, ವೀರಶೆಟ್ಟಿ ಇವಣಿ, ಉಮೇಶ್ ಪೂಜಾರಿ, ಪ್ರಕಾಶ್ ಸ್ವಾಮಿ ಹಿರೇಮಠ, ನಾಮದೇವ ರಾಠೋಡ ಸೇರಿದಂತೆ ಇತರರು ಇದ್ದರು. ಕಲ್ಯಾಣ ಏರಿ ನಿರೂಪಿಸಿ ವಂದಿಸಿದರು.

