ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ | ಹಲವು ಸಾಧನೆಗಳನ್ನು ವಿಶ್ವಕ್ಕೆ ತಿಳಿಸುವ ಕಾರ್ಯಕ್ರಮ: ಮುದ್ನಾಳ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ 135 ನೇ ಮನ್ ಕೀ ಬಾತ್ ಕಾರ್ಯಕ್ರಮ ಹಲವು ಸಾಧನೆಗಳನ್ನು ದೇಶದ ಜನತೆಗೆ ತಿಳಿಸುವ ಅತ್ಯದ್ಬುತ ಕಾರ್ಯಕ್ರಮವಾಗಿದೆ ಎಂದು ಎಂದು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಹೇಳಿದರು.
ಅವರು ನಗರದ ವಿಶ್ವಾರಾಧ್ಯರ ಮನೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ 135 ನೇ ಮನ್ ಕೀ ಬಾತ್ ಕಾರ್ಯಕ್ರಮ ವಿಕ್ಷೀಸಿ ನಂತರ ಅಲ್ಲಿ ಸೇರಿದ್ದ ಪಕ್ಷದ ಮುಖಂಡ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಇದು ಕೇವಲ ರೇಡಿಯೋ ಕಾರ್ಯಕ್ರಮವಲ್ಲ, ದೇಶದ ಅಭಿವೃದ್ಧಿ, ಜನಜಾಗೃತಿ ಹಾಗೂ ಸಮಾಜ ಪರಿವರ್ತನೆಗೆ ದಾರಿದೀಪವಾಗಿದೆ ಎಂದರು. ಆತ್ಮನಿರ್ಭರ ಭಾರತದ ಸಂಕಲ್ಪ, ದೇಶಭಕ್ತಿ ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಎತ್ತಿ ತೊರಿಸುತ್ತದೆ ಎಂದರು.
ಜ್ಞಾನಾಸ್ತ್ರ ಕ್ಷಿಪಣಿಯ ಯಶಸ್ವಿ ಪರೀಕ್ಷೆ, ಭಾರತೀಯ ನೌಕಾಪಡೆ ಐಎನ್ಎಸ್ ದುನಾಗಿರಿ, ಐಎನ್ಎಸ್ ಸಂಶೋಧಕ ಮತ್ತು ಐಎನ್ಎಸ್ ಅಗ್ರಯ್ ಯುದ್ಧನೌಕೆಗಳ ಸೇರ್ಪಡೆ ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದ್ದು, ಇದನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾದ ವಿಷಯ ಮೋದಿ ಅವರು ಹೇಳಿದ್ದು ಕೇಳುಗರಿಗೆ ಹೆಮ್ಮೆಯ ವಿಷಯಾಗಿತ್ತೆಂದು ರಾಚಣ್ಣಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಪ್ರಧಾನಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶ ಇನ್ನಷ್ಟು ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಈ ವೇಳೆ ಮುಖಂಡರಾದ ಸಿದ್ರಾಮ ರೆಡ್ಡಿ, ಭೀಮನಗೌಡ ಕ್ಯಾತನಾಳ, ಶರಣಪ್ಪ ಕ್ಯಾತನಾಳ, ಶಾಂತಗೌಡ ಪಗಲಾಪುರ, ಶರಣಯ್ಯ ಸ್ವಾಮಿ, ವೀರಭದ್ರಯ್ಯ ಸ್ವಾಮಿ, ವಿಶ್ವಾರಾಧ್ಯಸ್ವಾಮಿ, ಬನಪ್ಪ ಸಜ್ಜನ, ಸುಗಪ್ಪ ಸರ್, ಲಿಂಗಾರೆಡ್ಡಿ, ವಿ,ಎಸ್, ಹಿರೇಮಠ, ಮಳಪ್ಪ ಯಾದವ, ಪ್ರಕಾಶ ಸರ್, ಶಂಕರ ಸೋನಾರ, ಮಲ್ಲಿಕಾರ್ಜುನ ರಾಮಸಮುದ್ರ, ಶರಣಗೌಡ ಕಾಲಬೆಳಗುಂದಿ, ಸುರೇಶ್ ರಾಠೋಡ, ಹಣಮಂತ ವ್ಯಾಲಾಪುರ, ಶಿವರಾಜ್ ದಾಸನಕೇರಿ, ಚಂದ್ರಶೇಖರ್ ಕಡೆಸೂರ, ಶಶಿಕಾಂತ, ಶಿವಕುಮಾರ ಸ್ವಾಮಿ, ದಾನೇಶ್, ಚಾಂದ ಪಾಷಾ, ಕಿಶೋರ, ಶ್ರೀನಾಥ್ ಮಗ್ಗ, ಮರ್ಲಿಂಗ ಮಗ್ಗ , ನಾಗೇಶ್, ಪ್ರವೀಣ, ಯೇಸುದಾಸ, ವೀರೇಶ್, ವಿರೇಶ್ ಕೊಲ್ಲೂರ, ನಂದೀಶ್, ನಿತೀಶ್, ಪ್ರಜ್ವಲ, ಶರಣು, ಮಹೇಶ್, ಶಂಕರ, ಪ್ರಸನ್ನ , ಹನುಮಂತ, ರಮೇಶ್ , ಶರಣು, ಮಂಜುನಾಥ, ಮಹೇಶ್ಶೆಟ್ಟಿಹಾಳ, ಮೌನೇಶ್, ಶರಣು ಇನ್ನೂ ಮುಂತಾದವರು ಇದ್ದರು.
ಇದೇ ವೇಳೆ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

