ಚಿತ್ತಾಪುರ ವಕೀಲರ ಸಂಘಕ್ಕೆ ಪೀಠೋಪಕರಣಗಳಿಗಾಗಿ 15 ಲಕ್ಷ ಅನುದಾನ ಮಂಜೂರು ಮಾಡಲು ಎಂಎಲ್ಸಿ ಕಮಕನೂರ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ವಕೀಲರ ಸಂಘಕ್ಕೆ ಪೀಠೋಪಕರಣಗಳು ಮತ್ತು ಇತರೆ ತಾಂತ್ರಿಕ ಯಂತ್ರೋಪಕರಣಗಳು ಅವಶ್ಯಕತೆಯಿದ್ದು ಅಂದಾಜು 15 ಲಕ್ಷ ಅನುದಾನ ಮಂಜೂರು ಮಾಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ ಅವರು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ತಾವು ನಮ್ಮ ಭಾಗದವರಿಗೆ ಅನೇಕ ಸಂಘಗಳಿಗೆ ಕೊಡುಗೆ ಕೊಟ್ಟಿದ್ದು, ಸೇವಾ ಮನೋಭಾವನೆ ಮತ್ತು ಪರೋಪಕಾರಿ ವ್ಯಕ್ತಿಯಾಗಿದ್ದು, ಚಿತ್ತಾಪುರ ವಕೀಲರ ಸಂಘ ತಮ್ಮ ಮೇಲೆ ನಂಬಿಕೆಯನ್ನು ಹೊಂದಿದ್ದು ಕಾರಣ ಅಗತ್ಯ ಪೀಠೋಪಕರಣಗಳು ಹಾಗೂ ಯಂತ್ರೋಪಕರಣಗಳ ವ್ಯವಸ್ಥೆ ಮಾಡಿಕೊಡಿತ್ತಿರೆಂದು ನಂಬಿರುತ್ತೇವೆ.
ಚಿತ್ತಾಪುರ ತಾಲೂಕಿನಲ್ಲಿ ಸರ್ಕಾರ ಸುಸಜ್ಜಿತ ನ್ಯಾಯಾಲಯ ನಿರ್ಮಾಣ ಮಾಡಿದ್ದು ಸದರಿ ಅದರಲ್ಲಿ ವಕೀಲರ ಸಂಘವು ಕೂಡ ನಿರ್ಮಾಣ ಮಾಡಲಾಗಿದೆ. ಸದರಿ ಸಂಘದಲ್ಲಿ ಹೆಚ್ಚಿನ ಮಟ್ಟದಲ್ಲಿ ಯಾವುದೇ ಕಟ್ಟಡಕ್ಕೆ ತಕ್ಕಂತೆ ಪೀಠೋಪಕರಣಗಳು ಇರುವುದಿಲ್ಲ ಮತ್ತು ಹೆಚ್ಚಿನ ಮಟ್ಟದಲ್ಲಿ ತಾಂತ್ರಿಕ ಯಂತ್ರೋಪಕರಣಗಳು ನಮ್ಮ ಸಂಘದಲ್ಲಿ ಇರುವುದಿಲ್ಲ ಆದ್ದರಿಂದ ಚಿತ್ತಾಪುರ ತಾಲೂಕಿನ ಎಲ್ಲ ನ್ಯಾಯಾವಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದಾಗ ಎಂಎಲ್ಸಿ ಅವರು, ಕೂಡಲೇ ಅಗತ್ಯ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ಎಲ್ ವಾಡಿ, ಚಂದ್ರಶೇಖರ ಅಂಗಡಿ, ಪರಶುರಾಮ ಗಾಯಕವಾಡ ಮತ್ತು ಧನರಾಜ್ ದೇಶಪಾಂಡೆ ಸೇರಿದಂತೆ ಅನೇಕ ವಕೀಲರು ಇದ್ದರು.

