ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೋಲಿ ಸಮಾಜದ ವತಿಯಿಂದ ಗೌರವ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯದ ನೂತನ ಗೃಹ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ ನೇತೃತ್ವದಲ್ಲಿ ಮುಖಂಡರು ಬೆಂಗಳೂರಿನ ಸರ್ಕಾರಿ ವಸತಿ ಗೃಹದಲ್ಲಿ ಭೇಟಿ ಮಾಡಿ ಬುದ್ಧನ ಪ್ರತಿಮೆ ನೀಡಿ ಗೌರವಿಸಿ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ರಾಮಲಿಂಗ ಬಾನರ್, ಬಸವರಾಜ ಚಿನ್ನಮಳ್ಳಿ, ಪ್ರಭು ಹಲಕರ್ಟಿ, ಹಣಮಂತ ಸಂಕನೂರ, ದೇವಿಂದ್ರ ಅರಣಕಲ್, ದೇವಿಂದ್ರ ಕೆರಳ್ಳಿ, ಗುರುನಾಥ್ ಗುದಗಲ್, ಭೀಮರಾಯ ಹೊತಿನಮಡಿ, ಆಂಜನೇಯ ಜೀವಣಗಿ, ಶರಣಪ್ಪ ನಾಶಿ, ಮಲ್ಲಣ್ಣ ಮಾಲಗತ್ತಿ, ದುರ್ಜಿನ್ ನಾಟೀಕಾರ, ಹಣಮಂತ ಕಟ್ಟಿ, ಕರಣಕುಮಾರ ಅಲ್ಲೂರ, ಮಲ್ಲಿಕಾರ್ಜುನ ಸಂಗಾವಿ, ಗಂಗಾಧರ ಡಿಗ್ಗಿ ಸೇರಿದಂತೆ ಇತರರು ಇದ್ದರು.

