ಚಿತ್ತಾಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖಾಯಂಗೊಳಿಸಲು, ಉಪ ಕಾರಾಗೃಹ ಮಂಜೂರು ಮಾಡುವಂತೆ ವಕೀಲರ ಸಂಘ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಪ್ರತ್ಯೇಕಗೋಳಿಸುವ ಮತ್ತು ವಕೀಲರ ಸಂಘಕ್ಕೆ ಮೂಲಭೂತ ಸೌಕರ್ಯಗಳು ಮತ್ತು ಚಿತ್ತಾಪುರದಲ್ಲಿ ಉಪ ಕಾರಾಗೃಹ ಮಂಜೂರ ಮತ್ತು ವಕೀಲರ ಸಂಘಕ್ಕೆ ಪ್ರತ್ಯೇಕ ವಕೀಲರ ಸಂಘ ಕಟ್ಟಡ ಮಂಜೂರ ಮಾಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ ನೇತೃತ್ವದಲ್ಲಿ ವಕೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಚಿತ್ತಾಪುರ ತಾಲೂಕಿನಲ್ಲಿ ಈಗಾಗಲೇ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಾರದಲ್ಲಿ ತಾತ್ಕಾಲಿಕವಾಗಿ ಕೇವಲ 3 ದಿನಗಳ ಕಾಲ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಕಕ್ಷಿದಾರರಿಗೆ ಮತ್ತು ವಕೀಲರಿಗೆ ತೊಂದರೆಯಾಗುತ್ತಿದ್ದು ಮತ್ತು ನಮಲ್ಲಿ ಹೆಚ್ಚು ಪ್ರಕರಣಗಳು ಬಾಕಿಯಿದ್ದು ಚಿತ್ತಾಪುರನಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಖಾಯಂ ಮಾಡಬೇಕೆಂದು ಮತ್ತು ಚಿತ್ತಾಪುರದಲ್ಲಿ ಉಪ ಕಾರಾಗೃಹ ಮಾಡುವ ಕುರಿತು ಮತ್ತು ವಕೀಲರ ಸಂಘಕ್ಕೆ ಮೂಲಬೂತ ಸೌಕರ್ಯಗಳು ಹಾಗೂ ವಕೀಲರ ಸಂಘಕ್ಕೆ ಪ್ರತ್ಯೇಕ ವಕೀಲರ ಸಂಘ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಚಿತ್ತಾಪೂರ ತಾಲೂಕಿನ ವಕೀಲರ ಸಂಘದಲ್ಲಿ ಗ್ರಂಥಾಲಯ ಅಥವಾ ಇ ಗ್ರಂಥಾಲಯ ಮತ್ತು ರೈಲ್ವೆ (ಟ್ರಿಬ್ಯುನಲ್) ನ್ಯಾಯಾಲಯ ಕಲಬುರಗಿಯಲ್ಲಿ ಮಂಜೂರ ಮಾಡಬೇಕು ಮನವಿ ಮಾಡಿದರು.
ಚಿತ್ತಾಪುರ ತಾಲೂಕಿನಲ್ಲಿ ವಕೀಲರ ಸಂಖ್ಯೆ 100 ಕ್ಕೂ ಹೆಚ್ಚು ಇದ್ದು. ವಕೀಲರಿಗೆ ದಿನಾಲೂ ಅವಶ್ಯಕತೆ ಇರುವಂತಹ ಪುಸ್ತಕಗಳಾದ ಸಿ.ಪಿ.ಸಿ ಮತ್ತು ಸಿ.ಆರ್.ಪಿ.ಸಿ. ಹಾಗೂ ಸಾಕ್ಷಿ ಅಧಿನಿಯಮ ಇನ್ನು 2000 ಸಾವಿರಕ್ಕೂ ಹೆಚ್ಚು ವಿಷಯಗಳ ಅಭ್ಯಾಸ ಮಾಡಬೆಕಾಗಿರುತ್ತದೆ. ಆದಕಾರಣ ವಕೀಲರ ಹೆಚ್ಚಿನ ಸಮಯ ನ್ಯಾಯಾಲಯದಲ್ಲಿ ಸಮಯ ಕಳೆಯುವುದರಿಂದ ಇಲ್ಲಿ ಯಾವುದೇ ರೀತಿಯ ಗ್ರಂಥಾಲಯ ಇರುವುದಿಲ್ಲ, ಆದ್ದರಿಂದ ತಾವು ನಮ್ಮ ವಕೀಲರ ಸಂಘಕ್ಕೆ ಗ್ರಾಂಥಾಲಯ ಮಂಜೂರು ಮಾಡಬೇಕು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಲ್ಲಿಯವರಿಗೂ ಯಾವುದೇ ರೈಲ್ವೆ ಟ್ರಿಬ್ಯುನಲ್ ನೇಮಕ ಆಗಿರುವುದಿಲ್ಲ ಆದ್ದರಿಂದ ನಮ್ಮ ಎಲ್ಲ ಕಕ್ಷಿದಾರಿರಗೆ ಮತ್ತು ವಕೀಲರಿಗೆ ಅನುಕೂಲವಾಗಲು ರೈಲ್ವೆ ಟ್ರಿಬ್ಯುನಲ್ ಮಂಜೂರ ಮಾಡಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ.ಎಲ್ ವಾಡಿ, ಉಪಾಧ್ಯಕ್ಷ ಶರಣುಗೌಡ ಪಾಟೀಲ ಮತ್ತು ಸಹ ಕಾರ್ಯದರ್ಶಿ ಚಂದ್ರಶೇಖರ ಆರ್ ಅಂಗಡಿ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
