ಚಿತ್ತಾಪುರ ಗಣೇಶ ಚತುರ್ಥಿ ನಿಮಿತ್ತ ಅಲೆಮಾರಿ ಕಲಾ ವೇದಿಕೆಯಿಂದ ಜಾನಪದ ಕಲಾ ಸಂಭ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯ ಕೊಳಗೇರಿ ಮಂಡಳಿ ಕಾಲೋನಿ ಅಲೆಮಾರಿ ಕಲಾ ವೇದಿಕೆ ವತಿಯಿಂದ ಗಣೇಶ ಚತುರ್ಥಿ ನಿಮಿತ್ತ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬುರಕಥೆ ಶಂಕ್ರಮ್ಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಶಂಕರ ಶಾಸ್ತ್ರಿ ಮಾತನಾಡಿ, ಇಂದಿನ ಸಂದರ್ಭದಲ್ಲಿ ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸಿ ಸಮಾಜದಲ್ಲಿ ಕಲೆಯ ಕುರಿತು ನೃತ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಕಲೆ ಉಳಿಸಬೇಕೆಂದು ತಿಳಿ ಹೇಳಿದರು.
ಮುಖ್ಯ ಅತಿಥಿಯಾಗಿ ಪಂಡಿತ್ ಮಾತನಾಡಿ, ಇಂದಿನ ಸಮಾಜದಲ್ಲಿ ನಮ್ಮ ಅಲೆಮಾರಿಗಳಿಗೆ ಕಲೆಯೇ ಆಸರೆಯಾಗಿದ್ದು, ಇದರಿಂದಲೇ ಅವರ ಕುಟುಂಬದ ನಿರ್ವಹಣೆ ಆಗುತ್ತಿದೆ. ಹೊಟ್ಟೆ ಪಾಡಿಗಾಗಿ ಉಪಜೀವನ ನಡೆಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದಿನ ಕಲೆ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಗಂಗಮ್ಮ, ಭಾವಗೀತೆ ಕಲಾ ತಂಡ ಯಾದಗಿರ, ಮೋನಮ್ಮ ಸಮೋಹ ನೃತ್ಯ ಕಲಾ ತಂಡ ಚಿತ್ತಾಪುರ, ಜ್ಯೋತಿ, ಭರತನಾಟ್ಯ ಕಲಾತಂಡ ಚಿತ್ತಾಪುರ, ಬಸಮ್ಮ ಬುರಕಥೆ ಕಲಾ ತಂಡ ಚಿತ್ತಾಪುರ ಇವರು ಕಾರ್ಯಕ್ರಮದಲ್ಲಿ ವಿವಿಧ ರೀತಿ ತಮ್ಮ ತಮ್ಮ ಕಲಾ ತಂಡದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಅಲೆಮಾರಿ ಕಲಾವಿದರ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್.ಎಸ್. ಆಶ್ರಯ ಕಾಲೋನಿ ಅಧ್ಯಕ್ಷ ಗುರುಲಿಂಗಪ್ಪ, ಮುಖ್ಯ ಅತಿಥಿಗಳಾಗಿ ಪಂಡಿತ್, ಮಹಾಲಕ್ಷ್ಮೀ ಸಂಸ್ಕೃತ ಕಲಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಶರಣಮ್ಮ ಹಾಗೂ ಗಣೇಶ ಸಂಘದ ಅಧ್ಯಕ್ಷ ಸಿದ್ದರಾಮ, ಅಲೆಮಾರಿ ಕಲಾ ವೇದಿಕೆಯ ಅಧ್ಯಕ್ಷ ಮಾರುತಿ, ಗಣೇಶ ಸಂಘದ ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು. ಮಾರುತಿ ಸಿರವಟ್ಟಿ ನಿರೂಪಿಸಿ ವಂದಿಸಿದರು.

