ಚಿತ್ತಾಪುರ ಬನ್ನಿ ಮುಡಿಯುವ ಕಾರ್ಯಕ್ಕೆ ಕಂಬಳೇಶ್ವರ ಶ್ರೀ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಪ್ರಯುಕ್ತ ಪಟ್ಟಣದ ಬಸವೇಶ್ವರ ಶಾಲೆಯ ಹತ್ತಿರ ಇರುವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ಕೆ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು.
ಈ ವೇಳೆ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಹಿರಿಯರಾದ ನಾಗರೆಡ್ಡಿ ಪಾಟೀಲ ಕರದಾಳ, ಚಂದ್ರಶೇಖರ ಅವಂಟಿ, ಸೋಮಶೇಖರ ಪಾಟೀಲ ಬೆಳಗುಂಪಾ, ಚಂದ್ರಶೇಖರ ಕಾಂತಾ, ಮಲ್ಲಣ್ಣ ಮಾಸ್ಟರ್ ಮುಡಬೂಳ, ಮುಖಂಡರಾದ ರವೀಂದ್ರ ಸಜ್ಜನಶೆಟ್ಟಿ, ಚಂದ್ರಶೇಖರ ಉಟಗೂರ, ಆನಂದ ಪಾಟೀಲ ನರಿಬೋಳ, ಓಂಕಾರ ರೇಷ್ಮಿ, ನಾಗರೆಡ್ಡಿ ಗೋಪಸೇನ್, ಬಸವರಾಜ ಪಾಟೀಲ ಬೆಳಗುಂಪಾ, ಶ್ರೀನಿವಾಸ ರೆಡ್ಡಿ ಪಾಲಪ್, ಬಸವರಾಜ ಸಂಕನೂರ, ರೇವಣಸಿದ್ದಪ್ಪ ರೋಣದ್, ಅಂಬರೀಷ್ ಸುಲೇಗಾಂವ, ನಾಗರಾಜ ರೇಷ್ಮಿ, ಅನೀಲ್ ವಡ್ಡಡಗಿ, ಕೋಟೇಶ್ವರ ರೇಷ್ಮಿ, ರಾಜಶೇಖರ್ ಬಳ್ಳಾ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಂಜು ಶಾಸ್ತ್ರಿ, ಕರಿಬಸಯ್ಯ ಶಾಸ್ತ್ರಿ ಅವರು ಪೂಜೆ ಕಾರ್ಯ ನೇರವೇರಿಸಿದರು.
