Oplus_0

ಭಂಕೂರ ನರೇಶ ಕಲ್ಲಪ್ಪ ಮೆಂಗನ್ ನಿಧನ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನ ಶಾಂತನಗರ ಭಂಕೂರ ಗ್ರಾಮದ ನರೇಶ ಕಲ್ಲಪ್ಪ ಮೆಂಗನ್ (53) ( ಕ.ದ.ಸಂ.ಸ ರಾಜ್ಯ ಸಂ. ಸಂಚಾಲಕ ಸುರೇಶ ಮೆಂಗನ್ ಸಹೋದರ) ಶುಕ್ರವಾರ ಅ. 3 ರಂದು ಬೆಳಗ್ಗೆ 5 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಬ್ಬರು ಪುತ್ರಿಯರು, ತಾಯಿ ಹಾಗೂ ಸಹೋದರ ಸುರೇಶ ಮೆಂಗನ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಅ. 4 ರಂದು ಬೆಳಗ್ಗೆ 10 ಗಂಟೆಗೆ ಶಾಂತನಗರ ಭಂಕೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೇರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶೋಕ ಸಂತಾಪ: ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಗ್ರಾ.ಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ, ಸದಸ್ಯ ಶರಣಗೌಡ ದಳಪತಿ, ಲಕ್ಷ್ಮಿಕಾಂತ ಕಂದಗೋಳ, ಈರಣ್ಣ ಕಾರ್ಗಿಲ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ರಾಜೇಶ ಯನಗುಂಟಿಕರ, ಶಶಿಕಾಂತ ಧನ್ನಾ, ಭೀಮಯ್ಯ ಗುತ್ತೆದಾರ, ಶಂಕರ ಜಾನಾ, ಮುನ್ನಾ ಪಟೇಲ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!