Oplus_0

ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವದ ನಿಮಿತ್ತ ನಾಳೆ ಉಚಿತ ಕಣ್ಣಿನ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ: ಕಣ್ವಾ ನಾಯಕ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ಡಾ. ವಿಶ್ವನಾಥ ರೆಡ್ಡಿ ಅವರ ನೇತೃತ್ವದಲ್ಲಿ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ಇವರ ವತಿಯಿಂದ ಮತ್ತು ಧರ್ಮದರ್ಶಿ ಶ್ರೀ ರತ್ನಾಕರ ನಾಯಕ ಇವರ ಸಂಯುಕ್ತ ಆಶ್ರಯದಲ್ಲಿ ಅ.7 ರಂದು ರತ್ನಾಕರ ನಾಯಕ್ ಮನೆಯ ಹತ್ತಿರ, (ಪಲ್ಲಕ್ಕಿ ಹೊರಡುವ ಸ್ಥಳದಲ್ಲಿ) ಬೆಳಿಗ್ಗೆ 09.30 ರಿಂದ 2 ಗಂಟೆವರೆಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ ಏರ್ಪಡಿಸಲಾಗಿದೆ ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಚಾಲಕ ಕಣ್ವಾ ನಾಯಕ ತಿಳಿಸಿದ್ದಾರೆ.

ಶಿಬಿರದಲ್ಲಿ ನೇತ್ರ ರೋಗ ವಿಶೇಷತಜ್ಞರಿಂದ ಪರೀಕ್ಷೆ, ಉಚಿತ ಕಣ್ಣಿನ ಪೊರೆಯ (Cataract) ಪರೀಕ್ಷೆ, ಉಚಿತ ಔಷಧ ವಿತರಣೆ ಮಾಡಲಾಗುವುದು. ಶಿಬಿರದಲ್ಲಿ ಮೋತಿಬಿಂದು (Cataract) ಕಂಡುಬಂದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡಲಾಗುವುದು. ಶಸ್ತ್ರ ಚಿಕಿತ್ಸೆ ಪಡೆಯುವವರು ಯಶಸ್ವಿನಿ ಕಾರ್ಡ್, ಧರ್ಮಸ್ಥಳ ಸಂಘದ ಹೆಲ್ತ್ ಕಾರ್ಡ್ ಇದ್ದರೆ ಕಾರ್ಡಗಳ ಪ್ರಯೋಜನೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಹಿನ ಮಾಹಿತಿಗಾಗ ಕಣ್ವಾ ನಾಯಕ 9739627300, ಆಕಾಶ ಬಿರಾದರ 8050 535333, 7209 626262 ಇವರಿಗೆ ಸಂಪರ್ಕಿಸಬಹುದು, ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಆಧಾರ ಕಾರ್ಡ ತರಬೇಕು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!