Oplus_0

ಯರಗಲ್ ಜಮೀನು ಹರಾಜು ಪ್ರಕ್ರಿಯೆ ಯಶಸ್ವಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ನ್ಯಾಯಾಲಯದ ಆದೇಶದಂತೆ ಬಾಂಡ್ ಮೊತ್ತ ಭರಿಸದೆ ಇರುವುದರಿಂದ ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದ ಸ.ನಂ:4/*/1 ವಿ:3-30 ಎ.ಗುಂ. ಪೈಕಿ 10 ಗುಂಟೆಗೆ ಗುರುವಾರ ಹನುಮಾನ್ ದೇವಸ್ಥಾನದ ಆವರಣದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಜಮೀನಿನ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಹರಾಜಿನಲ್ಲಿ ವಿಜಯಕುಮಾರ್ ಬೆಣ್ಣೂರ, ಗಂಗಮ್ಮ ಭೀಮಶಾ, ಶಿವುಬಾಯಿ ಚಂದ್ರಶೇಖರ, ಸದಾಶಿವ ಮರೇಪ್ಪ ಅವರು ಭಾಗವಹಿಸಿದ್ದರು. ಸರ್ಕಾರಿ ಸವಾಲು 1,37,900 ರೂ. ಆಗಿತ್ತು 1,40,000 ದಿಂದ ಸವಾಲು ಪ್ರಾರಂಭವಾಗಿ  2.15 ಲಕ್ಷಕ್ಕೆ ವಿಜಯಕುಮಾರ ಬೆಣ್ಣೂರ್ ಅವರಿಗೆ ಅಂತಿಮವಾಗಿ ಸವಾಲು ಮುಕ್ತಾಯಗೊಂಡಿತ್ತು.

ಶೇ.50 ರಷ್ಟು ಹಣವನ್ನು ಸಂಜೆಯೊಳಗೆ ಪಾವತಿಸಿ ಉಳಿದ ಹಣವನ್ನು ಮೂರು ದಿನಗಳಲ್ಲಿ ಪಾವತಿಸಬೇಕು ಎಂದು ತಹಸೀಲ್ದಾರ್ ಹೇಳಿದಾಗ, ಶೇ.50 ರಷ್ಟು ಹಣ ಸ್ಥಳದಲ್ಲಿಯೇ ನಗದು ರೂಪದಲ್ಲಿ ವಿಜಯಕುಮಾರ್ ಬೆಣ್ಣೂರ್ ನೀಡಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಹ್ಮದ್ ಸುಬಾನ್, ತಹಸೀಲ್ ಕಚೇರಿಯ ಸಿಬ್ಬಂದಿಗಳಾದ ಆನಂದ ಪಾಟೀಲ ಲಕ್ಕಾ, ಮೈನೋದ್ದಿನ್, ಮಾರುತಿ ಎನ್, ವಿಜಯಕುಮಾರ್, ಗ್ರಾಪಂ ಅಧ್ಯಕ್ಷ ದೀಪಕ್ ಬೊಮ್ಮನೂರ, ಹಣಮಂತ ಮುತ್ತಗಿ, ಶಿವಮೂರ್ತಿ ಪಾಮನೂರ, ಆನಂದ ಯರಗಲ್, ರವಿಕಾಂತ್ ಮನೇರಿ, ಲಿಂಗರಾಜ್ ಹಿರೇಮಠ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!