ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲು ಗುತ್ತೇದಾರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿ ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಎಲ್ಲಾ ಶರಣಸತ್ಪುರುಷರು ಸಾಮಾಜಿಕ ಸಮಾನತೆಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ ಹೀಗಾಗಿ ಮಹಾಪುರುಷರು ಯಾವುದೇ ಜಾತಿ ಜನಾಂಗಕ್ಕೆ ಸಂಬಂಧಪಟ್ಟಿಲ್ಲ, ಇದ್ದದ್ದು ಇದ್ದ ಹಾಗೆ ನೇರವಾಗಿ ಹೇಳಿದ್ದರಿಂದಲೇ ನಿಜ ಶರಣರೆಂದು ಖ್ಯಾತಿ ಪಡೆದಿದ್ದಾರೆ ಇಂತಹ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿರುವುದು ಘೋರ ಅಪರಾಧವಾಗಿದೆ, ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುತ್ತಗಾ ಗ್ರಾಮದಲ್ಲಿ ಅ.9 ರಂದು ರಾತ್ರಿ ವೇಳೆ 12 ನೇ ಶತಮಾನದ ತಮ್ಮದೆ ರೀತಿಯಲ್ಲಿ ಸಮಾಜದ ಅಂಕು, ಡೊಂಕುಗಳನ್ನು ತಿದ್ದಿ ತೀಡುವುದರ ಮೂಲಕ ನಿಜ ಶರಣರೆಂದು ಪ್ರಸಿದ್ದಿ ಪಡೆದ ಅಂಬಿಗರ ಚೌಢಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ ವಿಕೃತ ಮನಸ್ಸಿನ ಕೀಡಿಗೇಡಿಗಳನ್ನು ಬಂಧಿಸಿ ಕಾನೂನಿನ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಕಲಬುರಗಿ ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಮುಂಜಾಗೃತ ಕ್ರಮವಾಗಿ ದೇಶದ ಶ್ರೇಷ್ಠ ನಾಯಕರ, ಸಂತರ ಮೂರ್ತಿಗಳ ಮುಂದೆ ಸಿಸಿ ಕ್ಯಾಮರಾಗಳು ಅಳವಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ಕಲ್ಯಾಣ ಕರ್ನಾಟಕ ರೈತ ಘಟಕ ಅಧ್ಯಕ್ಷ ಸುರೇಶ್ ಗುತ್ತೇದಾರ, ಪ್ರಧಾನ ಸಂಚಾಲಕ ಅಂಬರೀಶ್ ಮಾಳಗಿ, ವಾಡಿ ಅಧ್ಯಕ್ಷ ಸಿದ್ದು ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ ಅವರು ಒತ್ತಾಯಿಸಿದ್ದಾರೆ.

