ಡಾ.ರಾಚೋಟೇಶ್ವರ ಶ್ರೀಗಳಿಂದ 11 ದಿನಗಳ ಸಮಾಧಿ ಯೋಗ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನ ಹೊನಗುಂಟಾ, ಕುಂದನೂರ, ಯನಗುಂಟಿಯ ಭೀಮಾ, ಕಾಗಿಣಾ ಸಂಗಮ ಕ್ಷೇತ್ರದಲ್ಲಿರುವ ಕೂಡಲ ಸಂಗಮೇಶ್ವರ ದೇವಸ್ಥಾನದಲ್ಲಿ ಡಾ.ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 11 ದಿನಗಳ ಮೌನಾನುಷ್ಠಾನದ ದಿನಗಳ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡಿದ್ದಾರೆ.

ಸೇಡಂ ತಾಲೂಕಿನ ಬೂದಿಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿರುವ ಡಾ.ರಾಚೋಟೇಶ್ವರ ಶ್ರೀಗಳು ಸೆ.22 ರಿಂದ ಮೌನಾನುಷ್ಠಾನ ಕೈಗೊಂಡಿದ್ದು, ಅ.2 ರಂದು ರಾತ್ರಿ 3 ಗಂಟೆ ಬ್ರಾಹ್ಮ ಮಹೂರ್ತದಲ್ಲಿ ಶಿವಯೋಗ ಸಮಾಧಿ ಕೈಗೊಂಡಿದ್ದಾರೆ. ತ್ರಿಕೂಟವಾಗಿರುವ ಸಂಗಮೇಶ್ವರ ದೇವಸ್ಥಾನದಲ್ಲಿಯ ಒಂದು ದೇವಸ್ಥಾನದಲ್ಲಿ ಅನುಷ್ಠಾನ ಕೈಗೊಂಡಿದ್ದು, ಪೂಜ್ಯರು ಶಿವಯೋಗ ಸಮಾಧಿಗೆ ಹೋದ ನಂತರ ದೇವಸ್ಥಾನದ ದ್ವಾರವನ್ನು ಇಟ್ಟಿಗೆ, ಸಿಮೆಂಟ್‌ನಿಂದ ಮುಚ್ಚಲ್ಪಟ್ಟಿದೆ, ಇಡಿ ಗರ್ಭಗುಡಿಯಲ್ಲಿ ಗಾಳಿ, ಬೆಳಕು ಬರದಂತೆ ಮುಚ್ಚಲಾಗಿದೆ.

ಪೂಜ್ಯರು ಇಲ್ಲಿಯವರೆಗೆ ಒಟ್ಟು 59 ಮೌನಾನುಷ್ಠಾನ ಕೈಗೊಂಡಿದ್ದು, 15ನೇ ಶಿವಯೋಗ ಸಮಾಧಿ ಕೈಗೊಂಡಿದ್ದಾರೆ, ಮೌನಾನುಷ್ಠಾನ ಸಂದರ್ಭದಲ್ಲಿ ಬೆಳಗ್ಗೆ ಕೇವಲ ಬೇವಿನ ಎಲೆಯ ರಸ, ಸಂಜೆ ಬಿಲ್ವಪತ್ರೆ ಎಲೆಯ ರಸವನ್ನು ಮಾತ್ರ ಸೇವಿಸುತ್ತಿದ್ದು, ಶಿವಯೋಗ ಸಮಾಧಿ ಸ್ಥಿತಿಯಲ್ಲಿ ಯಾವುದನ್ನು ಸ್ವಿಕರೀಸುವದಿಲ್ಲ. ಅ.13 ರಂದು ಬೆಳಗ್ಗೆ 8 ಗಂಟೆಗೆ ಪೂಜ್ಯರು ತಮ್ಮ ಶಿವಯೋಗ ಸಮಾಧಿಯಿಂದ ಹೊರ ಬಂದು, ಅಭ್ಯಂಜನ ಸ್ನಾನ, ಪೂಜೆ ನಂತರ ಭಕ್ತರನ್ನು ಆಶೀರ್ವದಿಸಲಿದ್ದಾರೆ. ಪೂಜ್ಯರು ಕಳೆದ 25 ವರ್ಷಗಳಿಂದ ಆಹಾರ ಸ್ವೀಕರಿಸದೆ ಇದ್ದು, ಕೇವಲ ಹಾಲು ಹಣ್ಣು ಮಾತ್ರ ಸ್ವೀಕರಿಸುತ್ತಿದ್ದಾರೆ ಎಂದು ದೇವಸ್ಥಾನದಲ್ಲಿರುವ ಸೇಡಂ ತಾಲೂಕಿನ ಜಾಕನಳ್ಳಿಯ ಶಿವಯೋಗೇಶ್ವರ ಮಹಾಮಠದ ಅಭಿನವ ಗವಿಸಿದ್ದಲಿಂಗ ಶಿವಾಚಾರ್ಯರು ಮಾಹಿತಿ ನೀಡಿದರು.

ದುಶ್ಚಟಗಳ ಬಿಕ್ಷೆ – ಸದ್ಗುಣಗಳ ದೀಕ್ಷೆ ಪಾದಯಾತ್ರೆ :

ಅ.13 ರಂದು ಸಂಜೆ 5 ಗಂಟೆಗೆ ದುಶ್ಚಟಗಳ ಬಿಕ್ಷೆ, ಸದ್ಗುಣಗಳ ದೀಕ್ಷೆ ಸಂಕಲ್ಪದೊಂದಿಗೆ ಧರ್ಮ ಜಾಗೃತಿ ಪಾದಯಾತ್ರೆ ಪ್ರಾರಂಭವಾಗಲಿದ್ದು, ಹೊನಗುಂಟಾ, ಕುಂದನೂರ, ಯನಗುಂಟಿ ಭಕ್ತರಿಂದ ಭಜನೆ, ನಂದಿಕೋಲಿನ ಮೆರವಣಿಗೆಯೊಂದಿಗೆ ಇಂಗಳಗಿ, ಕಮರವಾಡಿ, ಬೊಮ್ಮನಳ್ಳಿ, ಅಳ್ಕೊಳ್ಳಿ, ಅಲ್ಲೂರ, ಭೀಮನಳ್ಳಿ, ಮೋಟನಳ್ಳಿ, ಹೊಸಳ್ಳಿ, ಇಸ್ಲಾಮಪೂರ ಮಾರ್ಗವಾಗಿ ಅ.17ರಂದು ಸಂಜೆ ಗುರುಮಿಟಕಲ್ ತಾಲೂಕಿನ ಚಿಂತನಳ್ಳಿಯ ಗವಿ ಸಿದ್ದಲಿಂಗೇಶ್ವರ ದೇವಸ್ಥಾನ ತಲುಪಿ ಮುಕ್ತಾಯವಾಗಲಿದೆ.

Spread the love

Leave a Reply

Your email address will not be published. Required fields are marked *

You missed

error: Content is protected !!