Oplus_0

ಚಿತ್ತಾಪುರ ರೈತ ಬಾಂಧವರು ಕಡ್ಡಾಯವಾಗಿ ಎಫ್ಐಡಿ ಮಾಡಿಸಿ: ಸಂಜೀವಕುಮಾರ ಮಾನಕರ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಎಲ್ಲಾ ರೈತರು ತಮ್ಮ ತಮ್ಮ ಜಮೀನಿನ ಸರ್ವೆ ನಂಬರುಗಳು FID (FRUITS ID) ಗೆ ಜೋಡಣೆ ಆಗಿರುವ ಕುರಿತು ಖಚಿತಪಡಿಸಿಕೋಳ್ಳಬೇಕು ಹಾಗೂ ಯಾವ ರೈತರು ಇಲ್ಲಿಯವರೆಗೆ FID (FRUITS ID) ಮಾಡಿಕೊಂಡಿರುವದಿಲ್ಲಾ ಅಂತಹ ರೈತರ ಕೂಡಲೇ ತಮ್ಮ ಆಧಾರ ಕಾರ್ಡು, ಪಹಣಿ, ಬ್ಯಾಂಕ ಪಾಸ್ ಬುಕ್ ಪ್ರತಿಗಳನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಸಿ ಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಕೂಡಲೆ FID ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ತಿಳಿಸಿದ್ದಾರೆ.

ಒಂದು ವೇಳೆ ರೈತರು FID (FRUITS ID) ಮಾಡಿಕೊಳ್ಳದೆ ಇದ್ದಲ್ಲಿ ಹಾಗೂ ತಮ್ಮ ಜಮೀನಿನ ಸರ್ವೆ ನಂಬರಗಳು FID (FRUITS ID) ಗೆ ಜೋಡಣೆ ಆಗದೆ ಇದ್ದಲ್ಲಿ ಅಂತಹ ರೈತರಿಗೆ ಬೆಳೆ ಹಾನಿ ಪರಿಹಾರ, ಬೇಳೆ ವಿಮೆ ಪರಿಹಾರ ಹಾಗೂ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಾವು ಬೆಳೆದ ಬೆಳೆಗಳನ್ನು ಖರಿದಿಸಲಾಗುವದಿಲ್ಲಾ ಎಂದು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!