ಮುತ್ತಗಾ ಅಂಬಿಗರ ಚೌಡಯ್ಯ ಭಗ್ನ ಪ್ರಕರಣ | ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿ: ಮಲ್ಲಣ್ಣಪ್ಪ ಸ್ವಾಮಿಜಿ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ಮುತ್ತಗಾ ಗ್ರಾಮದಲಿ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ನಿಜವಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತೊನಸನಹಳ್ಳಿ(ಎಸ್) ಅಲ್ಲಂಪ್ರಭು ಸಂಸ್ಥಾನ ಮಠದ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಮುತ್ತಗಾ ಗ್ರಾಮಕ್ಕೆ ಬೇಟಿ ನೀಡಿ ಭಗ್ನಗೊಳಿಸಿದ ಅಂಬಿಗರ ಚೌಡಯ್ಯ ಮೂರ್ತಿ ಸ್ಥಳವನ್ನು ವೀಕ್ಷಿಸಿ ಮಾತನಾಡಿದರು. ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ನಿರಪರಾಧಿಗಳಿಗೆ ಅಪರಾಧಿ ಮಾಡುವ ಕೆಲಸ ನಡೆಯುತ್ತಿರುವುದು ಮಾತ್ರ ಸರಿಯಲ್ಲ ಎಂದರು.
ಘಟನೆ ಕೇಸನ್ನು ಬೇಗನೆ ಮುಗಿಸುವ ತರಾತುರಿಯಲ್ಲಿ ನಿರಪರಾಧಿಗಳಿಗೆ ಅಪರಾಧಿಯಾಗಿ ಮಾಡುವುದು ತರವಲ್ಲ. ನಿಜವಾದ ಆಪರಾಧಿಗಳ ಹುಡುಕಿ ಶಿಕ್ಷೆಕೊಡುವ ಕೆಲಸ ಮಾಡಬೇಕು. ಶರಣರ ಮೂರ್ತಿಗೆ ಅಪಚಾರ ಮಾಡುವ ಕೆಲಸ ಮಾಡಬಾರದು, ಇದರಿಂದ ಸಮಾಜದಲ್ಲಿ ಆಶಾಂತಿ ಉಂಟಾಗುತ್ತದೆ. ಗ್ರಾಮದಲ್ಲಿ ಶಾಂತಿ, ಸಾಮರಸ್ಯ, ಸೌಹಾರ್ದತೆ ನೆಲೆಯುವ ನಿಟ್ಟಿನಲ್ಲಿ ಕೆಲಸವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀವೇದವ್ಯಾಸ ಪೀಠದ ಸ್ವಾಮೀಜಿ, ಹಡಪದ ಅಪ್ಪಣ್ಣ ಪೀಠದ ಸ್ವಾಮೀಜಿ, ಅಂಬಿಕಾ ಜಾಲಗಾರ ಬೆಂಗಳೂರು ಹಾಗೂ ಗ್ರಾಮಸ್ಥರು ಇದ್ದರು.

