Oplus_0

ವೀರ ಕನ್ನಡಿಗ ಅವಾರ್ಡ್ಸ್ – 2025 ಪ್ರಶಸ್ತಿಗೆ ಅಮರೇಶ್ವರಿ ಚಿಂಚನಸೂರ ಆಯ್ಕೆ, ಡಿ.4 ರಂದು ಪ್ರಶಸ್ತಿ ಪ್ರದಾನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕನ್ನಡ ನಾಡು-ನುಡಿ ಏಳಿಗೆಗಾಗಿ ಶ್ರಮಿಸುತ್ತಿರುವ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸುವ ZEE ಕನ್ನಡ ನ್ಯೂಸ್ ವೀರ ಕನ್ನಡಿಗ ಅವಾರ್ಡ್ಸ್ – 2025 ಪ್ರಶಸ್ತಿಗೆ ಚಿತ್ತಾಪುರ ಪಟ್ಟಣದ ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ  ಡಾ.ಅಮರೇಶ್ವರಿ ಬಾಬುರಾವ್ ಚಿಂಚನಸೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ  ಡಿಸೆಂಬರ್ 4 ರಂದು ಸಾಯಂಕಾಲ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ವೀರ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಅಮರೇಶ್ವರಿ ಚಿಂಚನಸೂರ ಅವರಿಗೆ ಶಿಕ್ಷಣ ಸಂಸ್ಥೆಯ ಶಾಲಾಕಾಲೇಜುಗಳು ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!