ಖಾತಾ ನಕಲು ಹಾಗೂ ಮೋಟೇಷನ್ ನಿಗದಿತ ಸಮಯದಲ್ಲಿ ವಿತರಣೆ ಮಾಡುವಂತೆ ಹಾಗೂ ಬಯೋಮೆಟ್ರಿಕ್ ಅಳವಡಿಸುವಂತೆ ಮಾದಿಗ ದಂಡೋರ ಮನವಿ
ನಾಗಾವಿ ಎಕ್ಸಪ್ರೆಸ್
ವಾಡಿ: ಪುರಸಭೆಯಲ್ಲಿ ಖಾತಾ ನಕಲು ಹಾಗೂ ಮೋಟೇಷನ್ ನಿಗದಿತ ಸಮಯದಲ್ಲಿ ವಿತರಣೆ ಮಾಡುವಂತೆ ಹಾಗೂ ಬಯೋ ಮೇಟ್ರಕ್ ಅಳವಡಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಎಸ್ ಮುಕ್ಕನಾಳ ಅವರು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ವಾಡಿ ಪುರಸಭೆ ಕಾರ್ಯಾಲಯದಲ್ಲಿ ಯಾವುದೇ ರೀತಿಯ ಸಕಾಲ ನಾಮಫಲಕ ಇರುವುದಿಲ್ಲ. ಇದರ ಕುರಿತು ಕಳೆದ ಅಧಿಕಾರಿಗಳಿಗೆ ಹಲವು ಭಾರಿ ಅರ್ಜಿಯನ್ನು ನೀಡಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ. ಹಾಗೇ ಸಾರ್ವಜನಿಕರ ಕೆಲಸಗಳಾದ ಖಾತಾ ನಕಲು ಹಾಗೂ ಮೊಟೇಷನ್ ಇನ್ನಿತರ ಸೌಲಭ್ಯಗಳನ್ನು ಅವಧಿಯ ಒಳಗಡೆ ಜನರಿಗೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ತಾವುಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಕಾರ್ಯಲಯದಲ್ಲಿ ಬಯೋ ಮೆಟ್ರಿಕ್ ಹಾಜರಾತಿ ಇಲ್ಲದ ಕಾರಣ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಹಾಗೇ ಕಚೇರಿಗೆ ಬರುತ್ತಿದ್ದಾರೆ ಇದರ ಕುರಿತು ಸಹ ನಾವು ನಮ್ಮ ನಿಯೋಗವು ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದು ಸಹ ಇರುತ್ತದೆ ಆದರೂ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಆದಕಾರಣ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಕಾಲ ದಿನ ಒಳಗಡೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

