ಭರತನೂರ ಮಠದ ಕಲ್ಯಾಣ ಮಂಟಪಕ್ಕೆ ಭೂಮಿ ಪೂಜೆ | ಶೀಘ್ರದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ: ಚಿಕ್ಕಗುರುನಂಜೇಶ್ವರ ಸ್ವಾಮೀಜಿ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಭರತನೂರ ಗ್ರಾಮದ ಶ್ರೀ ಗುರುನಂಜೇಶ್ವರ ವಿರಕ್ತ ಮಠದ ಆವರಣದಲ್ಲಿ ಭರತನೂರ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರ ಅನೂಕುಲಕ್ಕಾಗಿ ನೂತನ ಕಲ್ಯಾಣ ಮಂಟಪಕ್ಕೆ ಶ್ರೀಮಠದ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ನೂತನ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ಭಕ್ತರ ಆಶಯದಂತೆ ಶೀಘ್ರದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಗೊಳ್ಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಜಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಮುಖಂಡರಾದ ಮಲ್ಲಿಕಾರ್ಜುನ ಹಸರಗುಂಡಗಿ, ಪ್ರಕಾಶರೆಡ್ಡಿ ರಾಜಾಪೂರ, ಭೋಗಪ್ಪ ಮನ್ನಳ್ಳಿ, ಗೋವಿಂದರೆಡ್ಡಿ ತುಮಕುಂಟೆ, ಬಸವರಾಜ ಬುಳ್ಳಾ, ದಶರಥ ಕಲಬುರಗಿ, ಅಣೀವಿರಪ್ಪ ಪೋಲಿಸ ಪಾಟೀಲ್, ಶಾಮರಾವ ಮಂಗಲಗಿ, ಗುರುನಂಜಯ್ಯ ಮಠಪತಿ, ರಾಮುಗೌಡ ಗೋಟೂರ, ಮುರಗಯ್ಯ ಸ್ವಾಮಿ ಮಠಪತಿ, ಸಿದ್ದರಾಮಯ್ಯ ಯಲಮಡಗಿ ಸೇರಿದಂತೆ ಇತರರು ಇದ್ದರು.

