Oplus_0

ಅಲ್ಲೂರ ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿ ರಚನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಅಲ್ಲೂರ ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ (ಎಸ್ಡಿಎಂಸಿ) ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಗುರು ಅಂಬಣ್ಣ ತಿಳಿಸಿದ್ದಾರೆ.

ಕಳೆದ ಫೆ.5 ರಂದು ನಡೆದ ಪಾಲಕ ಮತ್ತು ಪೋಷಕರ ಸಭೆಯಲ್ಲಿ ಎಲ್ಲಾ ಪೋಷಕರ ಸರ್ವಾನುಮತದಿಂದ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ನೂತನ ಪದಾಧಿಕಾರಿಗಳು:

ಸಿದ್ದು ಮಾಸಬೊ (ಅಧ್ಯಕ್ಷರು), ರೇಣುಕಾ ಮಲ್ಲಿಕಾರ್ಜುನ್ (ಉಪಾಧ್ಯಕ್ಷರು), ಬಸವರಾಜ್ ಬಣಗಾರ, ಪರಶುರಾಮ, ಪೀರಪ್ಪ ಹಳೇಗಿಡ, ಬಸವರಾಜ ಜಾಡರ್, ಕಾಸಿಂಬೀ ಭಾಷಾ ಖಾನ್, ಮಲ್ಲಮ್ಮ ಬುಸೆರಿ, ರಾಜು ಹೊರಗಿನಮನಿ,  ಕವಿತಾ ಕಾಶಿನಾಥ್ ಗುತ್ತೇದಾರ, ದೇವಮ್ಮ ಬೈನರ್, ಮಲ್ಲಪ್ಪ ನಾಟೆಕಾರ್, ಸೂರಪ್ಪ ಗಮಗ, ಉಮಾದೇವಿ ಸಾಬಣ್ಣ ತಳವಾರ್, ದೇವಮ್ಮ ದುರ್ಗಪ್ಪ ನರಬೋಳಿ, ಬಸ್ಸು ಪುರನ್, ಸಾಬವ್ವ ತೇಲಗೂರ, ಅನಂತಮ್ಮ ದೇವಪ್ಪ ಫಿಟ್ಲಿ (ಸದಸ್ಯರು) ಅವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಆಗಿ ರವೀಂದ್ರ ಬೈನರ್, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಪರಡಿ, ಸಿಆರ್’ಸಿ ವಿಜಯಲಕ್ಷ್ಮಿ ಹೊಸಮನಿ ಸೇರಿದಂತೆ ಸಹ ಶಿಕ್ಷಕರು ಉಪಸ್ಥಿತರಿದ್ದರು. ನೂತನವಾಗಿ ರಚನೆಯಾದ ಎಸ್ಡಿಎಂಸಿ ಸಮಿತಿಗೆ ಗ್ರಾಮದ ಪೋಷಕರು ಹಾಗೂ ಹಿರಿಯರು ಗಣ್ಯರು ಸನ್ಮಾನಿಸಿ ಶುಭ ಹಾರೈಸಿದರು.

Spread the love

Leave a Reply

Your email address will not be published. Required fields are marked *

error: Content is protected !!