ದಂಡೋತಿ ಮದರಸಾ ತೋಹಿದ್ -ಇ- ಅರಾಬಿಕ್ ಏಜುಕೇಶನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ | ಭೂದಾನಿ ಮಹ್ಮದ್ ಖುಮೀರ್ ಭಾವಾ ಸಾಬ್ ಪಠಾಣ್ ಅವರಿಗೆ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಮದರಸಾ ತೋಹಿದ್ -ಇ- ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಶನಿವಾರ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ಟ್ರಸ್ಟ್ ಹೆಸರಿಗೆ 1 ಎಕರೆ ಭೂಮಿ ದಾನ ಮಾಡಿದ ಭೂದಾನಿ ಮಹ್ಮದ್ ಖುಮೀರ್ ಭಾವಾ ಸಾಬ್ ಪಠಾಣ್ ಅವರನ್ನು ಟ್ರಸ್ಟ್ ಅಧ್ಯಕ್ಷ ಖಾಜಾ ಪಾಷಾ ಶೇಕ್ ಹುಸೇನ್ ಅವರು ಸನ್ಮಾನಿಸಿದರು.
ಮುಖಂಡ ಸೀರಾಜ್ ದರ್ಗಾ ಮಾತನಾಡಿ, ದಂಡೋತಿ ಗ್ರಾಮದಲ್ಲಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಮದರಸಾ ತೋಹಿದ್ -ಇ- ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯಾಗಿದ್ದು ಒಳ್ಳೆಯ ಬೆಳವಣಿಗೆ. ಅದರಲ್ಲೂ ಟ್ರಸ್ಟ್ ಹೆಸರಿಗೆ 1 ಎಕರೆ ಭೂಮಿ ದಾನ ಮಾಡಿದ ಮಹ್ಮದ್ ಖುಮೀರ್ ಭಾವಾ ಸಾಬ್ ಪಠಾಣ್ ಅವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖಂಡ ರಮೇಶ್ ಕವಡೆ ಮಾತನಾಡಿ, ಮದರಸಾ ತೋಹಿದ್ -ಇ- ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಹೆಸರಿಗೆ 1 ಎಕರೆ ಭೂಮಿ ಸರ್ಕಾರದ ನಿಯಮದನ್ವಯ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದು ಒಳ್ಳೆಯ ಶಿಕ್ಷಣ ಸಂಸ್ಥೆ ಆರಂಭವಾಗಲಿದೆ. ಹೀಗಾಗಿ ಇದಕ್ಕೆ ಎಲ್ಲರೂ ತನು, ಮನ, ಧನ ದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಹಬಿಬೋದ್ದಿನ್ ಡಕಾರೆ, ಕಾರ್ಯದರ್ಶಿ ಬಂಧಗಿಸಾಬ್ ಡೊಂಗಾ, ಮುಖಂಡರಾದ ಐಹ್ಮದ್ ಶೇಖ್ ಹುಸೇನ್, ಇಂಪಿಕಾರ್ ಪಟೇಲ್, ಮುಸ್ತಾಕ್ ಪಠಾಣ್, ಅಬ್ಬಾಸ್ ಅಲಿ ಪಠಾಣ್, ಸಲೀಮ್ ಜಮ್ಮಾನ್, ಶೇಖ್ ಮಹಿಬೂಬ್, ಗೌಸ್ ಐಹ್ಮದ್, ವಾಜೀದ್ ಗುತ್ತೇದಾರ, ಹಮೀದ್ ಜಮ್ಮಾನ್, ಮೈನೊದ್ದಿನ್ ತೊನಸನಳ್ಳಿ, ಮಕ್ಬುಲ್, ಸಾಧೀಬ್ ಗುತ್ತೇದಾರ ಸೇರಿದಂತೆ ಇತರರು ಇದ್ದರು. ರಮೇಶ್ ಕವಡೆ ನಿರೂಪಿಸಿದರು.

