ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಪ್ರಾರಂಭಿಸಿದ ಭೂಮಾಪಕರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪರವಾನಗಿ ಭೂಮಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ತನಕ ಸಾಮೂಹಿಕವಾಗಿ ಕೆಲಸ ಸ್ಥಗಿತಗೊಳಿಸುವ ಹಾಗೂ ನಮ್ಮ ಲಾಗಿನ್‌ಗಳಲ್ಲಿ ಇರುವ ಕಡತಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಕಾರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ಚಿತ್ತಾಪುರ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಮುಷ್ಕರ ನಡೆಸಿ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಅರುಣಕುಮಾರ್ ಶಂಬೇವಾಡ ಮಾತನಾಡಿ, ಈ ಹಿಂದೆ ಆನೇಕ ಬಾರಿ ನಮ್ಮ ಉದ್ಯೋಗ ಸಂಭಂದಿತ ಗಂಭೀರ ಸಮಸ್ಯೆಗಳು ಹಾಗೂ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಇಲಾಖೆಗೆ ಹಾಗೂ ಸರ್ಕಾರಕ್ಕೆ ಲಿಖಿತವಾಗಿ ರಾಜ್ಯ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಹಾಗೂ ಇಲಾಖೆ ನಮ್ಮ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸುವುದಾಗಿ ಭರವಸೆ ನೀಡಿರುವುದೇ ಹೊರತು ವಾಸ್ತವವಾಗಿ ಯಾವುದೇ ಬೇಡಿಕೆಗಳು ಇದುವರೆಗೂ ಈಡೇರಿಸಿಲ್ಲ. ಇಂತಹ ನಿರಂತರ ವಿಳಂಬ ಹಾಗೂ ನಿರ್ಲಕ್ಷ್ಯದ ಧೋರಣೆಯಿಂದಾಗಿ, ನಮ್ಮ ದೈನಂದಿನ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿರುತ್ತದೆ. ಪ್ರಸ್ತುತ ನಮಗೆ ನೀಡಲಾಗುತ್ತಿರುವ ಕೇವಲ 1200 ಸಂಭಾವನೆಯಲ್ಲೇ ಬಾಂದು ಜವಾನರಿಗೆ ನೀಡಬೇಕಾದ ವೆಚ್ಚ ಸ್ಥಳ ಪರಿಶೀಲನೆ ಹಾಗೂ ಪ್ರಯಾಣ ವೆಚ್ಚಗಳನ್ನು ಸಹ ನಾವುಗಳೇ ಭರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ವಿಲೇ ಅಥವಾ ತಕರಾರರು ಅರ್ಜಿಗಳಿಗೆ ಯಾವುದೇ ಸೇವಾ ಶುಲ್ಕವನ್ನು ನೀಡಲಾಗುತ್ತಿಲ್ಲ. ಅಳತೆ ಕಾರ್ಯಕ್ಕೆ ಸಂಭದಿಸಿದ ಎಲ್ಲಾ ಕರ್ಚು ವೆಚ್ಚಗಳನ್ನು ಸಹ ನಾವುಗಳೇ ಹೊರುವಂತಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ, ನಾವುಗಳು ದಿನನಿತ್ಯದ ಕೂಲಿ ಕಾರ್ಮಿಕರಂತೆ ಕೆಲಸ ಮಾಡುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಲಾಖೆಯಲ್ಲಿ ಕಡತಗಳು ಇದ್ದರೆ ಮಾತ್ರ ಕೆಲಸ ಹಾಗೂ ಸಂಭಾವನೆ, ಕಡತಗಳು ಇಲ್ಲದಿದ್ದರೆ ಕೆಲಸವು ಇಲ್ಲ. ಸಂಭಾವನೆಯೂ ಇಲ್ಲದ ಅತೀ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ಈ ಹಿಂದೆ ನಾವುಗಳು ಕಾರ್ಯ ನಿರ್ವಹಿಸಿದ ತಕರಾರು ಪ್ರಕರಣಗಳು, ವಿವಿಧ ಇಲಾಖಾ ಕಾರ್ಯಗಳಿಗೆ ಸಂಭದಿಸಿದ ವೇತನಗಳು ಇದುವರೆಗೂ ನಮಗೆ ಪಾವತಿಯಾಗಿಲ್ಲ. ಇದರಿಂದ ಪರವಾನಗಿ ಭೂಮಾಪಕರು ಆರ್ಥಿಕವಾಗಿ ಮಾತ್ರವಲ್ಲದೆ, ಸಾಮಾಜಿಕವಾಗಿ ಗೌರವಯುತ ಜೀವನ ನಡೆಸಲು ಸಹ ಸಾಧ್ಯಾವಾಗದ ಸ್ಥಿತಿಗೆ ತಲುಪಿದ್ದವೆ. ಇದರ ಮಧ್ಯ ನಾವು ಪರಾವನಗಿ ಭೂಮಾಪಕರು ಇಲಾಖೆಯ ಸರ್ಕಾರಿ ಭೂಮಾಪಕರಿಗೆ ಸಮಾನವಾಗಿ, ಇಲಾಖೆ ಸೂಚಿಸಿದ ಎಲ್ಲಾ ರೀತಿಯ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಿಕೊಂಡು ಬಂದಿರುತ್ತವೆ. ಅವುಗಳಲ್ಲಿ ಮುಖ್ಯವಾಗಿ 11ಇ, ಹದ್ದುಬಸ್ತು, ತಕರಾರು ಕಡತಗಳು, ಸ್ವಾಮಿತ್ವ, ಪೋಡಿ ಮುಕ್ತ, ಇ-ಸ್ವತ್ತು, ಆಕಾರಬಂಧು ಗಣಿಕಿಕಾರ್ಯ, ಇತರ ಎಲ್ಲವನ್ನು ಯಾವುದೇ ದಿನಾಯಿತಿ ಇಲ್ಲದೆ, ಸಂಪೂರ್ಣ ಹೊಣೆಗಾರಿಕೆಯಿಂದ ನಿರ್ವಹಿಸುತ್ತಿದ್ದೇವೆ ಹಾಗೂ ಬೇರೆ ತಾಲೂಕಿಗೆ ನಿಯೋಜಿಸಿದ್ದು ಪರವಾನಗಿ ಭೂಮಾಪಕರಿಗೆ ವೇತನವಿಲ್ಲದೆ ಅನಿವಾರ್ಯತೆಯಿಂದ ಕೆಲಸ ಮಾಡುತ್ತಿದ್ದು ಮತ್ತು ವೇತನವಿಲ್ಲದೆ ಆಕಾರಬಂಧ್ ಗಣಕೀಕರಣ ಮಾಡುತ್ತಿದ್ದೇವೆ. ಅದರಂತೆ ಪ್ರತಿ ಕಡತಕ್ಕೆ ಸಂಭಾವನೆ ಎಂಬ ಅಸಮಾನ ವ್ಯವಸ್ಥೆಯನ್ನು ಕೈಬಿಟ್ಟು, ನಮ್ಮ ಸೇವೆಯನ್ನು ಸಮಗ್ರವಾಗಿ ಪರಿಗಣಿಸಿ, ಪರಾವನಗಿ ಭೂಮಾಪಕರನ್ನು ಖಾಯಂಗಿಳಿಸುವುದು. ಪ್ರತಿ ತಿಂಗಳು ನಿಗಧಿತ ವೇತನ ವ್ಯವಸ್ಥೆ ಜಾರಿಗೆ ತರುವುದು, ಸೇವಾ ಭದ್ರತೆ ಒದಗಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಅನುಷ್ಠಾನಗೊಳಿಸುವುದು. ಸರ್ಕಾರಿ ನೌಕರರಂತೆ ಆರೋಗ್ಯ ವಿಮೆ ನೀಡಲು ಕ್ರಮ ತೆಗೆದುಕೊಳ್ಳುವುದು ಎಂಬ ನಮ್ಮ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾವುಗಳು ಒಗ್ಗಟ್ಟಾಗಿ ಒತ್ತಾಯಿಸುತ್ತವೆ. ಈ ಹಿನ್ನಲೆಯಲ್ಲಿ, ನಮ್ಮ ಸಮಸ್ಯೆಗಳನ್ನು ಭೂದಾಖಲೆಗಳ ಆಯುಕ್ತರ ಗಮನಕ್ಕೆ ತಂದು, ಅವುಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೂ, ಯಾವುದೇ ಪರ್ಯಾಯವಿಲ್ಲದೆ ನಾವುಗಳು ಸಾಮೂಹಿಕವಾಗಿ ಕೆಲಸ ಸ್ಥಗಿತಗೋಳಿಸಲು ನಿರ್ಧರಿಸಿದ್ದೇವೆ. ಈ ಸಂದರ್ಭದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಪರವಾನಗಿ ಭೂಮಾಪಕರ ಮೋಜಿಣಿ ಹಾಗೂ ಆಕಾರಬಂಧ್ ಗಣಕೀಕರಣ ಲಾಗಿನ್ ಗಳನ್ನು ಡಿ ಆಕ್ಟಿವೆಟ್ ಮಾಡಿಸಿ, ಲಾಗಿನ್ ಗಳಲ್ಲಿ ಇರುವ ಕಡತಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಿಸುವವರೆಗೆ ಗುರುವಾರದಿಂದ ಅರ್ನಿದಿಷ್ಠಾವಧಿ ಮುಷ್ಕರ ಕೈಗೊಂಡು ಚಿತ್ತಾಪುರ ತಾಲೂಕಿನಲ್ಲಿ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸುಧಾಕರ್ ಡೆಂಗಿ, ಅಧ್ಯಕ್ಷ ಅರುಣಕುಮಾರ್ ಶಂಬೇವಾಡ, ಕಾರ್ಯದರ್ಶಿ ರಮೇಶ್ ಗೋಲ್ಡ್ ಸ್ಮಿತ್, ಉಪಾಧ್ಯಕ್ಷ ಸದಾಶಿವ ರೆಡ್ಡಿ, ಪ್ರಧಾನ ಕಾರ್ಯದರ್ಶಿ ನಿಕೇತ್ ಪಾಟೀಲ್, ಖಜಾಂಚಿ ದತ್ತರಾಜು, ಸದಸ್ಯರಾದ ಇಮ್ತಿಯಾಜ್ ಅಹ್ಮದ್, ಯಮನಪ್ಪ, ವೀರೇಶ್, ಸಚಿನ್, ಈಶಪ್ಪ, ಸಂಜುನಾತ, ಸಿದ್ದಪ್ಪ, ಸುಭಾಷ್, ಆಕಾಶ್, ಅರುಣ್ ರಾಠೋಡ ಸೇರಿದಂತೆ ಇತರರು ಇದ್ದರು.

