ಗಂಗಾವತಿಯ ಡಾ. ಸಿ.ಎಂ ಕೊಟಗಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಗಂಗಾವತಿಯ ಪತ್ರಕರ್ತರು, ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಕನ್ನಡ ನಾಡು ನುಡಿ ಸೇವಕ ಡಾ. ಚನ್ನಬಸವ ಮಲ್ಲಿಕಾರ್ಜುನ್ ಕೊಟಗಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ನಯನ ಸಭಾಂಗಣದಲ್ಲಿ ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್ (ರಿ) ವಾರ್ಷಿಕೋತ್ಸವ ಅಂಗವಾಗಿ ಸಂಸ್ಕೃತಿಕ ಉತ್ಸವ ಮತ್ತು ದಿವ್ಯ ಚೇತನ ಪ್ರಶಸ್ತಿ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಚನ್ನಬಸವ ಮಲ್ಲಿಕಾರ್ಜುನ್ ಕೊಟಗಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ ರಾಮು, ಪೊನ್ನಪ್ಪ ಮಾಜಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕೆ.ಎಸ್ ಮೃತ್ಯುಂಜಯ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಸುರೇಶ್ ರೆಡ್ಡಿ, ಎಮ್ ರಾಜಶೇಖರ್, ಚಂದ್ರಶೇಖರ್, ಗೀತಾ ಕೈವಾರ್, ಲಕ್ಷ್ಮೀ ಕೊಟಗಿ, ಮಂಜುಶ್ರೀ, ಶ್ರೀದೇವಿ ಕೋಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

