ಚಿತ್ತಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಣ್ಣ ಕೈಗಾರಿಕೆಗಳ ಸಂಘದಿಂದ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಸಣ್ಣ ಕೈಗಾರಿಕೆಗಳ ಸಂಘ (CTSSIA) ಅಧ್ಯಕ್ಷ ಸಯ್ಯದ್ ನಿಜಾಮುದ್ದೀನ್ ಚಿಸ್ತಿ ಅವರ ನೇತೃತ್ವದ ನಿಯೋಗ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಚಿತ್ತಾಪುರದಲ್ಲಿ ನಡೆಯುತ್ತಿರುವ KSSIDC ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿತ್ತು.
ಈ ಯೋಜನೆಯನ್ನು ಮೇ.18 ರಂದು ನಡೆದ ಕೆಕೆಆರ್’ಡಿಬಿ ಸಭೆಯಲ್ಲಿ ಪ್ರಸ್ತಾಪಿಸಿ, ಚಿತ್ತಾಪುರ KSSIDC ಕೈಗಾರಿಕಾ ಪ್ರದೇಶಕ್ಕೆ ಶೇ.50 KKRDB ಅನುದಾನ ಸೌಲಭ್ಯ ಮಂಜೂರು ಮಾಡುವಂತೆ ಸಂಘವು ಮನವಿ ಮಾಡಿತು. ಈ ಅನುದಾನದಿಂದ ಸ್ಥಳೀಯ MSME ಉದ್ಯಮಿಗಳು, ಮೊದಲ ತಲೆಮಾರಿನ ಉದ್ಯಮಿಗಳು ಹಾಗೂ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಸಹಾಯವಾಗಲಿದ್ದು, ಕೈಗಾರಿಕಾ ನಿವೇಶನಗಳ ಬೆಲೆ ಕಡಿಮೆಯಾಗುತ್ತದೆ. ಜೊತೆಗೆ ಹೊಸ ಕೈಗಾರಿಕೆಗಳು ಆರಂಭವಾಗಲು, ಉದ್ಯೋಗಾವಕಾಶಗಳು ಹೆಚ್ಚಲು ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ಸಿಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಯಿತು.
ಮನವಿಯನ್ನು ಗಮನದಿಂದ ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.

