ಶಹಾಬಾದ ರೈತ ಸಂಘದ ಪದಾಧಿಕಾರಿಗಳ ನೇಮಕ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಪದಾಧಿಕಾರಿಗಳನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಜಿಲ್ಲಾ ಸಂಚಾಲಕ ಮರಿಯಪ್ಪ ಹಸ್ನಾಪುರ್ ಅವರು ನೇಮಕ ಮಾಡಿದ ಆದೇಶ ಪ್ರತಿ ನೀಡಿದರು.
ನೂತನ ಪದಾಧಿಕಾರಿಗಳು:
ವಸಂತಕುಮಾರ್ ಬಿ, (ಗೌರವಾಧ್ಯಕ್ಷರು), ಕುಮ್ಮಣ್ಣಾ ಕುನ್ನೂರ (ಅಧ್ಯಕ್ಷರು), ಶಿವಣ್ಣ ಮುತ್ತಗಾ (ಕಾರ್ಯಾಧ್ಯಕ್ಷರು), ಮಂಜುನಾಥ ವಾಲೀಕಾರ (ಪ್ರಧಾನ ಕಾರ್ಯದರ್ಶಿ), ನಾಗರಾಜ ಮುದ್ನಾಳ, ಮಲ್ಲಿಕಾರ್ಜುನ ನಾಯ್ಕೋಡಿ (ಉಪಾಧ್ಯಕ್ಷರು), ಕಾಶಿನಾಥ ಜೋಗಿ (ಖಜಾಂಚಿ), ರವಿ ಮರಗೋಳ (ಕಾರ್ಯದರ್ಶಿ), ಈಶ್ವರ ಮುಗುಳನಾಗಾಂವ (ಸಂಘಟನಾ ಕಾರ್ಯದರ್ಶಿ), ಹಾಜಪ್ಪ ರದ್ದೇವಾಡಿ (ಹಸಿರು ಸೇನೆ ಸಂಚಾಲಕ) ಅವರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಲ್ಲಪ್ಪ ತಳವಾರ್, ವೀರೇಶ ಮಸ್ತೂರ್, ಶಿವುಕುಮಾರ ನಾಟೀಕಾರ ಸೇರಿದಂತೆ ಅನೇಕರು ಹಾಜರಿದ್ದರು.

